ಸೋಮವಾರದಂದು ಮುಂಬೈ ಷೇರುಪೇಟೆ ತತ್ತರಿಸಿಹೋಗಿದ್ದು, ಒಂದೇ ದಿನ ಹೂಡಿಕೆದಾರರಿಗೆ ಬರೋಬ್ಬರಿ 4.23 ಲಕ್ಷ ಕೋಟಿ ರೂಪಾಯಿ ನಷ್ಟವುಂಟಾಗಿದೆ. ಘಟಾನುಘಟಿ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ದೊಡ್ಡಮಟ್ಟದ ಕುಸಿತ ಕಂಡಿದೆ.
ವಾರದ ಮೊದಲ ದಿನವೇ ಸಂಭವಿಸಿದ ಈ ಕುಸಿತದಿಂದ ಹೂಡಿಕೆದಾರರು ಕಂಗಾಲಾಗಿ ತಲೆಮೇಲೆ ಕೈಹೊತ್ತು ಕೂತರು. ಭಾರತಿ ಏರ್ಟೆಲ್, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್ ಸೇರಿದಂತೆ ಹಲವು ಕಂಪನಿಗಳ ಷೇರುಗಳ ಮೌಲ್ಯ ಕುಸಿತ ಕಂಡಿತು.
ಕೋವಿಡ್ ನಿಯಂತ್ರಣಕ್ಕೆ ಬಾರದಿರುವುದರಿಂದ ಕೆಲವು ರಾಷ್ಟ್ರಗಳು ಮತ್ತೆ ಲಾಕ್ ಡೌನ್ ಹೇರಿಕೆ ಮಾಡುವ ಚಿಂತನೆಯಲ್ಲಿವೆ ಎಂಬ ಕಾರಣಕ್ಕೆ ಈ ಕುಸಿತ ಸಂಭವಿಸಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗೆ ರೈತರಿಂದ ವಿರೋಧ ವ್ಯಕ್ತವಾಗುತ್ತಿರುವುದು ಮತ್ತೊಂದು ಕಾರಣವೆನ್ನಲಾಗಿದೆ.