ನೂತನ ಕೃಷಿ ಮಸೂದೆಯನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರ, ಇದಕ್ಕೆ ವಿರೋಧ ವ್ಯಕ್ತಪಡಿಸಿ ದೇಶದಾದ್ಯಂತ ರೈತರು ಪ್ರತಿಭಟಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ಸಿಹಿ ಸುದ್ದಿ ನೀಡಿದೆ.
ಗೋಧಿ ಸಹಿತ 6 ಹಿಂಗಾರು ಹಂಗಾಮಿನ ಬೆಳೆಗಳ ಬೆಂಬಲ ಬೆಲೆ ಏರಿಕೆಗೆ ಕೇಂದ್ರ ಸಂಪುಟ ಸಮಿತಿ ಒಪ್ಪಿಗೆ ಸೂಚಿಸಿದ್ದು, ಈ ಮೂಲಕ ಕೃಷಿ ಮಸೂದೆ ಜಾರಿಯಿಂದ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಲಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದೆ.
(ಪ್ರತಿ ಕ್ವಿಂಟಾಲ್ ಗೆ) ಗೋಧಿ 50 ರೂಪಾಯಿ ಬೆಂಬಲ ಬೆಲೆ ಹೆಚ್ಚಳದೊಂದಿಗೆ 1975 ರೂ., ಕಡಲೆ 225 ರೂಪಾಯಿ ಏರಿಕೆಯೊಂದಿಗೆ 5100, ಮಸೂರ್ ದಾಲ್ ರೂಪಾಯಿ ಹೆಚ್ಚಳದೊಂದಿಗೆ 5100, ಬಾರ್ಲಿ 50 ರೂ. ಹೆಚ್ಚಳದೊಂದಿಗೆ 1600, ಸಾಸಿವೆ 225 ರೂಪಾಯಿ ಏರಿಕೆಯೊಂದಿಗೆ 4650 ಹಾಗೂ ಕುಸುಬೆ 112 ರೂಪಾಯಿ ಏರಿಕೆಯೊಂದಿಗೆ 5327 ರೂಪಾಯಿ ನಿಗದಿಪಡಿಸಲಾಗಿದೆ.