alex Certify ಟಾಯ್ಲೆಟ್ ಕ್ಲೀನ್ ಆಗಿ ಘಮ ಘಮ ಪರಿಮಳ ಬೀರಬೇಕೆಂದರೆ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಯ್ಲೆಟ್ ಕ್ಲೀನ್ ಆಗಿ ಘಮ ಘಮ ಪರಿಮಳ ಬೀರಬೇಕೆಂದರೆ ಹೀಗೆ ಮಾಡಿ

ಮನೆಯಲ್ಲಿರುವ ಟಾಯ್ಲೆಟ್ ಕ್ಲೀನ್ ಆಗಿದ್ದರೆ ಮನಸ್ಸಿಗೆ ನೆಮ್ಮದಿ. ಟಾಯ್ಲೆಟ್ ಎಷ್ಟೇ ಕ್ಲೀನ್ ಮಾಡಿದರೂ ಒಂದು ರೀತಿ ವಾಸನೆ ಬರುತ್ತಿರುತ್ತದೆ. ಅದನ್ನು ನಿವಾರಿಸಿಕೊಳ್ಳಲು ಇಲ್ಲೊಂದಿಷ್ಟು ಟಿಪ್ಸ್ ಇದೆ ಟ್ರೈ ಮಾಡಿ ನೋಡಿ.

* ಟಾಯ್ಲೆಟ್ ನಲ್ಲಿ ಜಾಸ್ತಿ ಗಾಳಿ ಬೆಳಕು ಇರುವ ಹಾಗೇ ನೋಡಿಕೊಳ್ಳಿ. ಕಿಟಕಿ ಇದ್ದರೆ ಅದನ್ನು ಮುಚ್ಚಬೇಡಿ. ಆದಷ್ಟು ತೆರೆದೆ ಇದ್ದರೆ ಒಳ್ಳೆಯದು.

*ಟಾಯ್ಲೆಟ್ ಪೇಪರ್ ರೋಲ್ ಗೆ 4ರಿಂದ 5 ಹನಿಗಳಷ್ಟು ನಿಮ್ಮಿಷ್ಟದ ಎಸೆನ್ಸಿಯಲ್ ಆಯಿಲ್ ಹಾಕಿ. ಇದರಿಂದ ಟಾಯ್ಲೆಟ್ ಪೇಪರ್ ತೆಗೆಯುವಾಗ ಈ ಪರಿಮಳ ಇಡೀ ಬಾತ್ ರೂಂ ತುಂಬಾ ಪಸರಿಸುತ್ತದೆ.

* ಟಾಯ್ಲೆಟ್ ನ ಟ್ಯಾಂಕ್ (ಪ್ಲಶ್ ಬಟನ್ ಹತ್ತಿರ ನೀರು ತುಂಬಿರುವಂತಹ ಟ್ಯಾಂಕ್) ಗೆ ಯಾವುದಾದರೂ ಫ್ಯಾಬ್ರಿಕ್ ಸಾಫ್ಟ್ ನರ್ ಅಥವಾ ಲಿಕ್ವಿಡ್ ಡಿಟರ್ಜೆಂಟ್ 2 ಮುಚ್ಚಳ ಹಾಕಿ. ಅಥವಾ ಎಸೆನ್ಸಿಯಲ್ ಆಯಿಲ್ 2 ಹನಿ ಹಾಕಿ. ಫ್ಲಶ್ ಮಾಡುವಾಗ ಪರಿಮಳ ಬರುತ್ತದೆ.

ಇನ್ನು ಲಿಂಬೆಹಣ್ಣನ್ನು ಕತ್ತರಿಸಿ ಇದನ್ನು ನಿಮ್ಮ ಟಾಯ್ಲೆಟ್ ನಲ್ಲಿ ಎಲ್ಲಾದರೂ ಇಡುವುದರಿಂದ ಫ್ರೆಶ್ ಪರಿಮಳ ಬೀರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...