2013 ರಲ್ಲಿ ಕೇದಾರನಾಥದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಏರ್ಪಟ್ಟಿತ್ತು. ಈ ವೇಳೆ ಸಾವಿರಾರು ಜನ ಸಾವನ್ನಪ್ಪಿದರೆ ಒಂದಿಷ್ಟು ಜನ ಕಾಣೆಯಾಗಿದ್ದರು. ಏಳು ವರ್ಷದ ಹಿಂದೆ ನಡೆದಿತ್ತು ಈ ಘಟನೆ. ಇದೀಗ ಹಿಮಾಲಯದ ರಾಂಬರ ಪ್ರದೇಶದಲ್ಲಿ ನಾಲ್ಕು ಜನರ ಅಸ್ತಿ ಪಂಜರ ಪತ್ತೆಯಾಗಿವೆ.
ಹೌದು, ಉತ್ತರಾಖಂಡ ಹೈಕೋರ್ಟ್ ಆದೇಶದ ಮೇಲೆ ಪೊಲೀಸರು ಹಾಗೂ ಎನ್ ಡಿ ಆರ್ ಎಫ್ ತಂಡ ಶೋಧನೆ ನಡೆಸಿತು. ಈ ವೇಳೆ ನಾಲ್ಕು ಅಸ್ತಿ ಪಂಜರಗಳು ಪತ್ತೆಯಾಗಿವೆ. ಇನ್ನು ಈ ಅಸ್ತಿಪಂಜರ ಯಾವ ಕುಟುಂಬಕ್ಕೆ ಸೇರಿದ್ದು ಎಂಬುದು ತಿಳಿದು ಬರದೇ ಇರುವ ಕಾರಣ ಕಾಣೆಯಾಗಿದ್ದವರ ಕುಟುಂಬದವರ ಡಿಎನ್ಎ ಪಡೆದು ಪರೀಕ್ಷಿಸಲಾಗುತ್ತಿದೆ.
ಇನ್ನು ಯಾವ ಅಸ್ತಿ ಪಂಜರದ ಡಿಎನ್ ಎ ಯಾವ ಕುಟುಂಬದ ಸದಸ್ಯನ ಜೊತೆ ಒಂದಿಕೊಳ್ಳುತ್ತೆ ಅನ್ನೋದನ್ನು ಪರೀಕ್ಷೆ ಮಾಡಲಾಗುತ್ತದೆ. ಇನ್ನು ಈ ಅಸ್ತಿಪಂಜರವನ್ನು ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ ಮಾಡಲಾಗಿದೆ.