ಬಾಲಿವುಡ್ ಸೇರಿದಂತೆ ಸಿನಿಮಾ ಇಂಡಸ್ಟ್ರಿಯಲ್ಲಿ ಮೀ ಟೂ ಆರೋಪಗಳು ಕೇಳಿ ಬಂದಿದ್ದವು. ಇದರಲ್ಲಿ ಬಾಲಿವುಡ್ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಕೂಡ ಆರೋಪ ಕೇಳಿ ಬಂದಿತ್ತು. ಆರೋಪ ಮಾಡಿದ್ದು ಪಾಯಲ್ ಘೋಶ್. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಕೂಡ ಆಗಿತ್ತು. ಅಲ್ಲದೆ ಕಂಗನಾ ಕೂಡ ಈ ನಟನಿಗೆ ಬೈದಿದ್ದರು. ಆದರೆ ಇದೀಗ ನಟಿ ತಾಪ್ಸಿ ಇವರನ್ನು ಹಾಡಿ ಹೊಗಳಿದ್ದಾರೆ. ಕಶ್ಯಪ್ ಸ್ತ್ರೀವಾದಿ ಎಂದು ಹೇಳುವ ಮೂಲಕ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.
ಹೌದು, ಅನುರಾಗ್ ಕಶ್ಯಪ್ ಸ್ತ್ರೀಪರ ನಿಂತವರು. ಅವರ ಜೊತೆ ನನಗೆ ಮತ್ತೊಂದು ಸಿನಿಮಾ ಮಾಡುವ ಆಸೆಯಿದೆ ಎಂದಿದ್ದಾರೆ. ಅಷ್ಟೆ ಅಲ್ಲ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಫೋಟೋ ಒಂದನ್ನು ಶೇರ್ ಮಾಡಿರುವ ಅವರು, ಅನುರಾಗ್ ಕಶ್ಯಪ್ ರನ್ನು ಬಣ್ಣಿಸಿದ್ದಾರೆ. ಇವರಂತಹ ಸ್ತ್ರೀ ವಾದಿ ಮತ್ತೊಬ್ಬರಿಲ್ಲ ಎಂದಿದ್ದಾರೆ.
ಒಟ್ನಲ್ಲಿ ಒಂದು ಕಾಲದಲ್ಲಿ ಮೀ ಟೂ ಆರೋಪ ಹೊರಿಸಿಕೊಂಡಿದ್ದ ನಟ, ನಿರ್ದೇಶಕನ ಪರ ಇದೀಗ ತಾಪ್ಸಿಯ ಹೊಗಳಿಕೆಯ ಮಾತು ಅನೇಕರಿಗೆ ಅನುಮಾನ ಹುಟ್ಟಿಸಿವೆ. ಹಾಗು ಆಶ್ಚರ್ಯ ಉಂಟು ಮಾಡಿವೆ. ಒಬ್ಬ ನಟಿ ಮೀಟೂ ಆರೋಪ ಹೊರಿಸಿದರೆ, ಮತ್ತೊಬ್ಬ ನಟಿ ಇವರನ್ನು ಹಾಡಿ ಹೊಗಳಿದ್ದಾರೆ.