ಸಂಗೀತಕ್ಕೆ ಎಲ್ಲರನ್ನೂ ಒಂದೆಡೆಗೆ ತಂದು ನಿಲ್ಲಿಸುವ ಶಕ್ತಿ ಇದೆ. ಸುಮಧುರ ಸಂಗೀತವು ಜನರ ಹೃದಯ ಮುಟ್ಟಬಲ್ಲದು. ಖುಷಿ ಕೊಡಬಲ್ಲದು.
ಟ್ವಿಟ್ಟರ್ ನಲ್ಲಿ ವೈರಲ್ ಆಗಿರುವ ವೃದ್ಧರೊಬ್ಬರು ಪಿಯಾನೋ ನುಡಿಸುವ ವಿಡಿಯೋ ಈ ಮೇಲಿನ ಮಾತುಗಳನ್ನ ನಿಜ ಮಾಡಿದೆ.
ನಿಕ್ ಹಾರ್ವೆ ಎಂಬುವರು ಟ್ವಿಟ್ಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ತಂದೆಗೆ ಮಗನೊಬ್ಬ ನೋಟ್ಸ್ ನೀಡಿ ಪಿಯಾನೋ ನುಡಿಸುವಂತೆ ಪ್ರೇರೇಪಿಸುತ್ತಿರುವ ವಿಡಿಯೋ ಹೃದಯ ಮುಟ್ಟುವಂತಿದೆ.
ಒಂದು ಕಾಲದಲ್ಲಿ ಸಂಗೀತ ಕಾರ್ಯಕ್ರಮಗಳನ್ನ ನಡೆಸಿಕೊಡುತ್ತಿದ್ದ ವ್ಯಕ್ತಿಗೆ ವಯೋಸಹಜ ಕಾಯಿಲೆ ಹಾಗೂ ಮರೆವಿನ ಕಾಯಿಲೆ ಆವರಿಸಿತ್ತು. ತಂದೆಯನ್ನು ಪಿಯಾನೋ ಮುಂದೆ ಕೂರಿಸಿ ನುಡಿಸಲು ಹೇಳುತ್ತಾರೆ. ಬಳಿಕ ಮಗ ಹೇಳಿದ ನಾಲ್ಕು ಕೀ ನೋಟ್ಸ್ ಬಗ್ಗೆ ಕ್ಷಣಕಾಲ ಯೋಚಿಸಿ ಸ್ಥಳದಲ್ಲೇ ಸಂಗೀತ ಸಂಯೋಜಿಸಿ ನುಡಿಸಲು ಆರಂಭಿಸುತ್ತಾರೆ. ಈ ವಿಡಿಯೋ 1.5 ದಶಲಕ್ಷ ಬಾರಿ ವೀಕ್ಷಣೆಯಾಗಿದ್ದು, 55 ಸಾವಿರ ಜನರು ಮೆಚ್ಚುಕೊಂಡಿದ್ದಾರೆ.
https://twitter.com/jamesnorden/status/1306791553806016512?ref_src=twsrc%5Etfw%7Ctwcamp%5Etweetembed%7Ctwterm%5E1306863547897589760%7Ctwgr%5Eshare_3&ref_url=https%3A%2F%2Fwww.indiatoday.in%2Ftrending-news%2Fstory%2Fold-man-suffering-from-dementia-plays-beautiful-tune-on-piano-in-viral-video-twitter-is-crying-1723615-2020-09-20