ಅಗರ್ತಲಾ: ಹಿಂದೆ ಬರಗಾಲದ ಸಮಯದಲ್ಲಿ ಬಿದಿರಿನ ಅಕ್ಕಿ ಬಡವರ ಬಂಧುವಾಗಿತ್ತು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರವಾಗಿತ್ತು. ಅಗರ್ತಲಾ ರಾಜ್ಯ ಸರ್ಕಾರ ಈಗ ಬಿದಿರಿನ ಕುಕೀಸ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ತ್ರಿಪುರಾ ಉತ್ತಮ ಗುಣಮಟ್ಟದ ಬಿದಿರು ಬೆಳೆಯುವ ಒಂದು ರಾಜ್ಯವಾಗಿದೆ.
ಶುಕ್ರವಾರ ಅಂತಾರಾಷ್ಟ್ರೀಯ ಬಿದಿರು ದಿನದಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರು ಬಿದಿರಿನ ಕುಕೀಸ್ ಹಾಗೂ ಬಿದಿರಿನಿಂದ ತಯಾರಿಸಿದ ಜೇನು ಸಂಗ್ರಹಿಸುವ ಬಾಟಲಿಯನ್ನು ಬಿಡುಗಡೆ ಮಾಡಿದರು.
ಸ್ಥಳೀಯವಾಗಿ ಮೂಲಿ ಎಂದು ಕರೆಯುವ ಬಿದಿರಿನಿಂದ ಬ್ಯಾಂಬೂ ಅಂಡ್ ಕೇನ್ ಡೆವಲಪ್ ಮೆಂಟ್ ಇನ್ಸ್ಟಿಟ್ಯೂಟ್ ಕುಕೀಸ್ ಅಭಿವೃದ್ಧಿ ಮಾಡಿದೆ. ತ್ರಿಪುರಾ ರಾಜ್ಯ ಇದನ್ನು ಈಶಾನ್ಯ ಭಾರತದಾದ್ಯಂತ ಮಾರಾಟಕ್ಕೆ ಸಿದ್ಧತೆ ನಡೆಸಿದೆ. ಕಾರ್ಬೊ ಹೈಡ್ರೇಟ್, ಪ್ರೋಟೀನ್, ಮಿನರಲ್, ವಿಟಮಿನ್, ಫೈಬರ್ ಹಾಗೂ ಲೋ ಕ್ಲಾಸ್ ಶುಗರ್ ಮುಂತಾದ ಪೋಶಕಾಂಶಗಳನ್ನು ಬಿದಿರಿನ ಕುಕೀಸ್ ಹೊಂದಿದೆ. ಇದು ತ್ರಿಪುರಾದ ಯುವಕರಿಗೆ ಸ್ವ ಉದ್ಯೋಗ ಕಲ್ಪಿಸಲಿದೆ ಎಂದು ದೇಬ್ ಹೇಳಿದ್ದಾರೆ.