ಮಧ್ಯಮ ವರ್ಗದ ಕೆಲ ಜನರ ವರ್ತನೆಗಳ ಬಗ್ಗೆ ಬಹಳಷ್ಟು ಜೋಕ್ಗಳು ಚಾಲ್ತಿಯಲ್ಲಿವೆ. ನೀವು Sarabhai vs Sarabhai ಸೀರೀಸ್ ನೋಡಿದ್ದಲ್ಲಿ, ಅದರಲ್ಲಿ ಮಾಯಾ ಪಾತ್ರಧಾರಿ ತನ್ನ ಸೊಸೆ ಮೋನಿಷಾಳ ಮಿಡಲ್ ಕ್ಲಾಸ್ ಬುದ್ಧಿಯ ಬಗ್ಗೆ ತಮಾಷೆ ಮಾಡುವುದನ್ನು ನೋಡಿರಬಹುದು.
ಮಾಯಾಳ ಮಾತುಗಳನ್ನು ಹರ್ಷ್ ಗೋಯೆಂಕಾರ ಈ ಟ್ವೀಟ್ ನೆನಪಿಸುತ್ತಿದೆ. ಒಂದು ವೇಳೆ ಭೇಲ್ ಪುರಿಯನ್ನು ಪಂಚತಾರಾ ಹೊಟೇಲ್ನ ವೇಟರ್ ಒಬ್ಬರು ಹೇಗೆ ವರ್ಣಿಸಬಹುದು ಎಂದು ವಿವರಿಸುತ್ತಾ, “ಪುರಿಯ ಮೇಲೆ ಅರೋಮಾಭರಿತ ಸಿಲಾಂಟರೋ ಹಾಗೂ ಶೆಫ್ ರ ಸೀಕ್ರೆಟ್ ಮೈಕ್ರೋ ಗ್ರೀನ್ಗಳು, ಖರ್ಜುರಗಳು ಹಾಗೂ ಕೆಂಪು ಮೆಣಸಿನಕಾಯಿಗಳಲ್ಲಿ ಮುಳುಗಿಸಿ, ಹುಣಸೆ ರಸದಲ್ಲಿ ಸೀಸನ್ ಮಾಡಿ, ಚೆನ್ನಾಗಿ ಹೆಚ್ಚಲಾದ ಆಲೂಗೆಡ್ಡೆ ಹಾಗೂ ಕ್ರಂಚಿ ರೌಂಡ್ ವೇಫರ್ಗಳೊಂದಿಗೆ ಟಾಸ್ ಮಾಡಲಾಗಿದೆ” ಎಂದು ಟ್ವೀಟ್ನಲ್ಲಿ ಭೇಲ್ ಪುರಿಯನ್ನು ವರ್ಣಿಸಿದ್ದಾರೆ.
https://twitter.com/PradeepKRKAR1/status/1306950672584192002?ref_src=twsrc%5Etfw%7Ctwcamp%5Etweetembed%7Ctwterm%5E1306950672584192002%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fwhen-waiter-describes-bhel-puri-in-maya-sarabhais-sophisticated-style%2F655047