ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಪಾಲಾಗಿರುವ ನಟಿ ಸಂಜನಾ ಗಲ್ರಾಣಿ ಅಲ್ಲಿಯೂ ತಮ್ಮ ನಖರಾ ಮುಂದುವರಿಸಿದ್ದಾರೆಂದು ಹೇಳಲಾಗಿದ್ದು, ಜೈಲಾಧಿಕಾರಿಗಳಿಗೆ ತಲೆನೋವುಂಟು ಮಾಡಿದ್ದಾರೆ ಎನ್ನಲಾಗಿದೆ.
ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲಿ ಮಾಧ್ಯಮಗಳ ಎದುರು ತಮಗೇನೂ ಗೊತ್ತಿಲ್ಲ. ನಾನು ಅಮಾಯಕಿ ಎಂದೆಲ್ಲಾ ಹೇಳಿದ್ದ ಸಂಜನಾ, ಮೊದಲೇ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ತಮ್ಮ ರಾಕಿ ಬ್ರದರ್ ರಾಹುಲ್ ಮುಗ್ಧ ಎಂದು ಹೇಳಿಕೊಂಡಿದ್ದರು.
ಆದರೆ ಪ್ರಕರಣದಲ್ಲಿ ಸಂಜನಾ ಪಾತ್ರದ ಕುರಿತು ಬಲವಾದ ಸಾಕ್ಷ್ಯ ಹೊಂದಿದ್ದ ಪೊಲೀಸರು, ಆಕೆಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ. ಅಲ್ಲಿ ತನಗೆ ಸಿಗರೇಟ್ ಬೇಕು, ಚಿಕನ್ ಬೇಕು ಎಂದು ಸಂಜನಾ ಮೊಂಡಾಟ ನಡೆಸಿದ್ದಾರೆನ್ನಲಾಗಿದ್ದು, ಬಂಧನದಲ್ಲಿರುವ ಮತ್ತೊಬ್ಬ ನಟಿ ರಾಗಿಣಿ ಮಾತ್ರ ಸೈಲೆಂಟಾಗಿ ಪುಸ್ತಕ ಓದಿಕೊಂಡು ಕಾಲ ಕಳೆಯುತ್ತಿದ್ದಾರಂತೆ.