ಕೊರೊನಾ ಮಹಾಮಾರಿಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರ ಮಧ್ಯೆ ಕೈಗೆ ಕೆಲಸವಿಲ್ಲ ಜನರ ಬದುಕು ಬೀದಿಗೆ ಬೀಳುವಂತಾಗಿದೆ. ಒಂದಿಷ್ಟು ಉದ್ಯಮಗಳು ಪುನರಾರಂಭಗೊಂಡಿವೆ. ಆದರೆ ಇನ್ನು ಕೆಲವೊಂದು ಉದ್ಯಗಳಿಗೆ ವಿನಾಯ್ತಿ ನೀಡಿದರೂ ಪುನರಾರಂಭಗೊಂಡಿಲ್ಲ. ಇದರಲ್ಲಿ ಶಾಲೆಗಳು ಕೂಡ ಒಂದು. ಇದೇ ತಿಂಗಳ 21ರಿಂದ ಶಾಲೆಗಳು ಆರಂಭಗೊಳ್ಳುತ್ತಿದ್ದರೂ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬಹುತೇಕ ಡೌಟ್.
ಇನ್ನು ಅನೇಕ ಖಾಸಗಿ ಶಾಲೆಗಳು ಕೊರೊನಾದಿಂದಾಗಿ ಮುಚ್ಚುವ ಹಂತ ತಲುಪಿವೆ. ಮತ್ತೊಂದಿಷ್ಟು ಶಾಲೆಗಳನ್ನು ಮಾರಾಟ ಮಾಡಲು ಮುಂದಾಗಿವೆ ಆಯಾಯ ಆಡಳಿತ ಮಂಡಳಿ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದಲ್ಲಿ ಸುಮಾರು 25 ಕ್ಕೂ ಹೆಚ್ಚು ಶಾಲೆಗಳು ಮಾರಾಟ ಹಂತಕ್ಕೆ ತಲುಪಿದ್ದು, ಖರೀದಿಗಾರರಿಗಾಗಿ ಕಾದು ಕುಳಿತಿವೆ.
ಸಿಬ್ಬಂದಿಗೆ ಸಂಬಳ ಸೇರಿದಂತೆ ಶಾಲೆಗಳ ಇತರ ವೆಚ್ಚಗಳನ್ನು ಭರಿಸೋದಕ್ಕೆ ಆಡಳಿತ ಮಂಡಳಿಯಿಂದ ಸಾಧ್ಯವಾಗುತ್ತಿಲ್ಲ. ಇತ್ತ ಸರ್ಕಾರ ಕೂಡ ಶಾಲಾ ಶುಲ್ಕ ಕಲೆಕ್ಟ್ ಮಾಡುವುದಕ್ಕೆ ಇನ್ನೂ ಒಪ್ಪಿಗೆ ನೀಡಿಲ್ಲ. ಹೀಗಾಗಿ ಹಣಕಾಸಿನ ತೊಂದರೆಯಿಂದ ಈ ನಿರ್ಧಾರಕ್ಕೆ ಬರಲಾಗಿದೆಯಂತೆ.