ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದಾದರೂ ಸುಶಾಂತ್ ಕುಟುಂಬ ಸೇರಿದಂತೆ ಕೋಟ್ಯಾಂತರ ಅಭಿಮಾನಿಗಳು ಇದನ್ನು ಒಪ್ಪೋದಿಕ್ಕೆ ತಯಾರಿಲ್ಲ. ಈಗಾಗಲೇ ಸಾವಿನ ಪ್ರಕರಣದ ವಿಚಾರಣೆ ಮುಂದುವರೆದಿದೆ. ದಿನಕ್ಕೊಂದು ಟ್ವಿಸ್ಟ್ಗಳು, ದಿನಕ್ಕೊಬ್ಬರ ಹೇಳಿಕೆಗಳು ಈ ಪ್ರಕರಣದ ದೃಷ್ಟಿಕೋನವನ್ನೇ ಬದಲಾಯಿಸುತ್ತಿವೆ. ಇದರ ಮಧ್ಯೆ ಸುಶಾಂತ್ ಗಳಿಸಿದ್ದ ಹಣದ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ.
ಹೌದು, ಸುಶಾಂತ್ ಸಿಂಗ್ ರಜಪೂತ್ ತನ್ನ ಜೀವನದುದ್ದಕ್ಕೂ ಗಳಿಸಿದ್ದ ಹಣ 60 ಕೋಟಿ ರೂಪಾಯಿ. ತಮ್ಮ ಸಿನಿಮಾಗಳ ಮೂಲಕ ಇಷ್ಟು ಹಣ ಸಂಪಾದನೆ ಮಾಡಿದ್ದಾರೆ. ಇನ್ನು ಇವರ ಬ್ಯಾಂಕ್ ಖಾತೆಗೆ ಸುಶಾಂತ್ ಸಿಂಗ್ ಸಹೋದರಿ ಪ್ರಿಯಾಂಕಾ ನಾಮಿನಿಯಾಗಿದ್ದಾರೆ ಎನ್ನಲಾಗುತ್ತಿದೆ.
ಅಷ್ಟೆ ಅಲ್ಲದೆ ಸುಶಾಂತ್ ಸಾವಿಗೂ ಮುನ್ನ ಅವರ ಖಾತೆಯಲ್ಲಿದ್ದ ಹಣ ಎರಡೂವರೆಯಿಂದ ಮೂರು ಕೋಟಿ ಎನ್ನಲಾಗಿದೆ. ಸುಮಾರು 60 ಕೋಟಿಯಲ್ಲಿ ಅಂಕಿತಾ ಲೋಖಂಡೆ ಹಾಗೂ ಸುಶಾಂತ್ ಹೆಸರಲ್ಲಿ ಮೂರು ಕೋಟಿ ಕೊಟ್ಟು ಫ್ಲಾಟ್ ಖರೀದಿಸಿದ್ದರು ಎನ್ನಲಾಗಿದೆ. ಅವರ ಸಾವಿಗೂ ಮುನ್ನ ಕಡಿಮೆ ಹಣ ಇರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.