ಭಾರತದಲ್ಲಿ ಮೇ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ 66 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆಂದು ಅಂದಾಜಿಸಲಾಗಿದೆ. ಎಂಜಿನಿಯರ್‌ಗಳು, ಶಿಕ್ಷಕರು ಸೇರಿದಂತೆ ಹಲವು ವೃತ್ತಿಪರರು ಇದ್ರಲ್ಲಿ ಸೇರಿದ್ದಾರೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ವರದಿಯ ಪ್ರಕಾರ, ಮೇ ನಿಂದ ಆಗಸ್ಟ್ ವರೆಗೆ 50 ಲಕ್ಷ ಕೈಗಾರಿಕಾ ಕಾರ್ಮಿಕರು ಕೂಡ ಉದ್ಯೋಗ ಕಳೆದುಕೊಂಡಿದ್ದಾರೆ.
ವೃತ್ತಿಪರರ ಉದ್ಯೋಗದ ಪ್ರಮಾಣವು 2016 ರಿಂದೀಚೆಗೆ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ. ಲಾಕ್‌ಡೌನ್, ಕ್ಲೆರಿಕಲ್ ಉದ್ಯೋಗಿಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇವುಗಳಲ್ಲಿ ಕಚೇರಿ ಗುಮಾಸ್ತರು ಬಿಪಿಓ, ಕೆಪಿಒ ಕೆಲಸಗಾರರು, ಡೇಟಾ ಎಂಟ್ರಿ ಆಪರೇಟರ್‌ಗಳು ಸೇರಿದ್ದಾರೆ. ಇವರುಗಳು ವರ್ಕ್ ಫ್ರಂ ಹೋಮ್ ಮಾಡ್ತಿದ್ದಾರೆ. ಇದು ಅವ್ರ ಕೆಲಸ ಉಳಿಯಲು ಕಾರಣವಾಗಿದೆ ಎಂದು ಸಿಎಂಐಇ ವರದಿ ಹೇಳಿದೆ.
ಈ ಮೊದಲು ಸಿಎಂಐಐ ಏಪ್ರಿಲ್‌ನಲ್ಲಿ 1.21 ಕೋಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆಂದು ಅಂದಾಜು ಮಾಡಿತ್ತು. ವೈಟ್ ಕಾಲರ್ ವೃತ್ತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಸಾಫ್ಟ್ ವೇರ್ ಎಂಜಿನಿಯರ್‌ಗಳು, ವೈದ್ಯರು, ಶಿಕ್ಷಕರು ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುವ ಇತರರು ಇದರಲ್ಲಿ ಸೇರಿದ್ದಾರೆ. ಸ್ವಯಂ ಉದ್ಯೋಗಿಗಳು ಸೇರಿಲ್ಲ. ಕಳೆದ ವರ್ಷ ಮೇ-ಆಗಸ್ಟ್ ನಲ್ಲಿ ಕೆಲಸ ಮಾಡುತ್ತಿರುವ ವೈಟ್ ಕಾಲರ್ ವೃತ್ತಿಪರರ ಸಂಖ್ಯೆ 1.88 ಕೋಟಿ ಎಂದು ಸಿಎಂಐಇ ಹೇಳಿದೆ. ಈ ವರ್ಷ ಮೇ-ಆಗಸ್ಟ್ ಅವಧಿಯಲ್ಲಿ ಈ ಸಂಖ್ಯೆ 1.22 ಕೋಟಿಗೆ ಇಳಿದಿದೆ.