ಅಮೆರಿಕದ ರ‍್ಯಾಪರ್ ನೊಟೋರಿಯಸ್ B.I.G. ಸಾಯುವ ಮುನ್ನ ತನ್ನ ಕಡೆಯ ಫೋಟೋಶೂಟ್ ಸಂದರ್ಭದಲ್ಲಿ ಧರಿಸಿದ್ದ ಚಿನ್ನದ ಬಣ್ಣದ ಪ್ಲಾಸ್ಟಿಕ್ ಕಿರೀಟವನ್ನು ಹರಾಜಿನಲ್ಲಿ $600,000 ತೆತ್ತು ಖರೀದಿಸಲಾಗಿದೆ. ಈ ಹರಾಜನ್ನು ಸೋಥೆಬಿಸ್ ನಡೆಸಿಕೊಟ್ಟಿದೆ.
1970ರಿಂದ 1990ರ ಮಧ್ಯಭಾಗದವರೆಗೆ ಕಲೆ ಹಾಗೂ ಸಂಸ್ಕೃತಿ ಮೇಲೆ ಹಿಪ್-ಹಾಪ್ ಹೊಂದಿರುವ ಪ್ರಭಾವವನ್ನು ಆಚರಿಸಲು ಈ ಹರಾಜನ್ನು ನಡೆಸಲಾಗಿತ್ತು ಎಂದು ಸೋಥೆಬೆಸ್ ತಿಳಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಹ್ಯಾಂಡ್ ಬ್ಯಾಗ್ ಹಾಗೂ ಸ್ನೀಕರ್ ಗಳನ್ನು ಹರಾಜು ಮಾಡುತ್ತಾ ಬಂದ ನ್ಯೂಯಾರ್ಕ್ ಮೂಲದ ಸೋಥೆಬಿಸ್ ತನ್ನ ಸೆಪ್ಟೆಂಬರ್ ಹರಾಜನ್ನು ಹಿಪ್-ಹಾಪ್ ಸಂಸ್ಕೃತಿಗೆ ಮೀಸಲಿಟ್ಟಿತ್ತು.