ಕೊರೊನಾ ಕಾರಣಕ್ಕೆ ಕಳೆದ 6 ತಿಂಗಳಿಂದ ಶಾಲೆ-ಕಾಲೇಜುಗಳು ಬಾಗಿಲು ಮುಚ್ಚಿವೆ. ಅನ್ಲಾಕ್ ನಂತ್ರ ದೇಶದಲ್ಲಿ ಒಂದೊಂದು ಸೇವೆ ಶುರುವಾಗ್ತಿದೆ. ಸೆಪ್ಟೆಂಬರ್ 21ರಿಂದ ಶಾಲೆ ಆರಂಭಿಸಲು ಕೇಂದ್ರ ಅನುಮತಿ ನೀಡಿದೆ. 9ನೇ ತರಗತಿಯಿಂದ 12ನೇ ತರಗತಿಗಳು ಸೆಪ್ಟೆಂಬರ್ 21ರಿಂದ ಶುರುವಾಗಲಿದೆ.
ಮಕ್ಕಳನ್ನು ಶಾಲೆಗೆ ಕಳುಹಿಸುವುದು ಪಾಲಕರ ನಿರ್ಧಾರ. ಶಾಲೆಗೆ ಬರದ ಮಕ್ಕಳಿಗೆ ಎಂದಿನಂತೆ ಆನ್ಲೈನ್ ಶಿಕ್ಷಣ ಮುಂದುವರೆಯಲಿದೆ. ಈ ಮಧ್ಯೆ ಗುಜರಾತ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೊರೊನಾ ಹೆಚ್ಚಾಗ್ತಿದ್ದು, ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲೆ ಆರಂಭಿಸದಿರಲು ನಿರ್ಧರಿಸಿದೆ. ಕ್ಯಾಬಿನೆಟ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಮಕ್ಕಳ ಹಿತದೃಷ್ಟಿಯಿಂದ ಗುಜರಾತ್ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಸೆಪ್ಟೆಂಬರ್ 21ರ ನಂತ್ರವೂ ಮಕ್ಕಳು ಶಾಲೆಗೆ ಬರಬೇಕಾಗಿಲ್ಲವೆಂದು ಸರ್ಕಾರ ಹೇಳಿದೆ. ನವೆಂಬರ್ ವರೆಗೆ ಗುಜರಾತ್ ನಲ್ಲಿ ಯಾವುದೇ ಶಾಲೆ ಆರಂಭವಾಗುವುದಿಲ್ಲ ಎನ್ನಲಾಗಿದೆ.