ಪಶ್ಚಿಮ ಬಂಗಾಳದ ಫಾಸ್ಟ್ ಟ್ರ್ಯಾಕ್ ಕೋರ್ಟ್, ವಕೀಲೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ವಕೀಲೆ, ಮೊಬೈಲ್ ಚಾರ್ಜರ್ ನಿಂದ ಪತಿ ಹತ್ಯೆ ಮಾಡಿದ್ದಳು. ಸಾಕ್ಷ್ಯ ನಾಶ ಮಾಡಿದ್ದಳು. ಒಂದು ವರ್ಷಗಳ ವಿಚಾರಣೆ ನಂತ್ರ ಕೋರ್ಟ್ ಶಿಕ್ಷೆ ಪ್ರಮಾಣ ಘೋಷಣೆ ಮಾಡಿದೆ.
ಘಟನೆ 2018ರಲ್ಲಿ ನಡೆದಿತ್ತು. ನವೆಂಬರ್ 24ರ ಮಧ್ಯರಾತ್ರಿ ಪತಿ ರಜತ್ ಡೇ ಕುತ್ತಿಗೆಗೆ ಮೊಬೈಲ್ ಚಾರ್ಜರ್ ಬಿಗಿದು ವಕೀಲೆ ಅನಿಂದಿತಾ ಹತ್ಯೆ ಮಾಡಿದ್ದಳು. ಇಬ್ಬರ ಮಧ್ಯೆ ಸಂಬಂಧ ಸರಿಯಿರಲಿಲ್ಲ. ಇದೇ ಕಾರಣಕ್ಕೆ ವಕೀಲೆ ಹತ್ಯೆ ಮಾಡಿದ್ದಾಳೆಂದು ರಜತ್ ಕುಟುಂಬದ ಪರ ವಕೀಲರು ವಾದಿಸಿದ್ದರು. ಮರಣ ದಂಡನೆ ಶಿಕ್ಷೆ ನೀಡುವಂತೆ ಮನವಿ ಮಾಡಿದ್ದರು.
ಈ ಘಟನೆಗೆ ಯಾವುದೇ ಸಾಕ್ಷ್ಯವಿಲ್ಲ. ಆ ರಾತ್ರಿ ನಾನು ಬೇರೆ ಕೋಣೆಯಲ್ಲಿ ಮಲಗಿದ್ದೆ. ಪತಿ ಕೂಗು ಕೇಳಿ ಅಲ್ಲಿಗೆ ಹೋಗಿದ್ದೆ ಎಂದು ವಕೀಲೆ ಹೇಳಿದ್ದಾಳೆ. ನಿರಪರಾಧಿಗೆ ಶಿಕ್ಷೆಯಾಗ್ತಿದೆ. ನಾನು ಕೊನೆಯುಸಿರಿರುವವರೆಗೂ ಹೋರಾಟ ನಡೆಸುತ್ತೇನೆಂದು ಆಕೆ ಹೇಳಿದ್ದಾಳೆ. ಅನಿಂದಿತಾ ಹಾಗೂ ಪತಿ ಇಬ್ಬರೂ ಕೊಲ್ಕತ್ತಾ ಕೋರ್ಟ್ ನಲ್ಲಿ ವಕೀಲರಾಗಿದ್ದರು.