
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ನಡೆಸುತ್ತಿರುವ ಸಿಬಿಐ ತಂಡಕ್ಕೆ ಸುಶಾಂತ್ ಅವರ ಫ್ಲಾಟ್ ಮೇಟ್ ಸಿದ್ಧಾರ್ಥ್ ಪಿಥಾನಿ ದೊಡ್ಡ ವಿಷ್ಯವೊಂದನ್ನು ಹೇಳಿದ್ದಾನೆ. ದಿಶಾ ಸಾಲಿಯನ್ ಸಾವಿನ ಸುದ್ದಿ ಕೇಳಿ ಸುಶಾಂತ್ ಪ್ರಜ್ಞೆ ತಪ್ಪಿದ್ದರಂತೆ. ಪ್ರಜ್ಞೆ ಬಂದ ನಂತ್ರ ಆ ಜನರು ನನ್ನನ್ನು ಸಹ ಕೊಲ್ಲುತ್ತಾರೆ ಎಂದು ಸುಶಾಂತ್ ಹೇಳಿದ್ದರಂತೆ.
ಜೂನ್ 8 ರಂದು ಸುಶಾಂತ್ ಸಿಂಗ್ ರಜಪೂತ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಫ್ಲ್ಯಾಟ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಶಾಂತ್ ಸಿಂಗ್ ರಜಪೂತ್ ಶವ ಜೂನ್ 14 ರಂದು ಮುಂಬೈನ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಜೂನ್ 8 ರಂದು ದಿಶಾ ಸಾವಿನ ಸುದ್ದಿ ಕೇಳಿ ಸುಶಾಂತ್ ತುಂಬಾ ಅಸಮಾಧಾನಗೊಂಡಿದ್ದರಂತೆ. ಸುಶಾಂತ್ ಸ್ಥಿತಿ ಚೆನ್ನಾಗಿರಲಿಲ್ಲವಂತೆ. ದಿಶಾ ಸಾವಿನ ನಂತರ, ಸುಶಾಂತ್ ಗೆ ಜೀವ ಭಯ ಶುರುವಾಗಿತ್ತಂತೆ, ಸುಶಾಂತ್ ಭದ್ರತೆ ಹೆಚ್ಚಿಸುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ.
ಸಿದ್ಧಾರ್ಥ್ ಈ ಹೇಳಿಕೆ ನಂತ್ರ ಸಿಬಿಐಗೆ, ದಿಶಾ ಹಾಗೂ ಸುಶಾಂತ್ ಸಾವಿಗೆ ಒಂದೇ ಕಾರಣವಿರಬಹುದಾ ಎಂಬ ಪ್ರಶ್ನೆ ಮೂಡಿದೆ. ದಿಶಾ ರಹಸ್ಯವೊಂದು ಸುಶಾಂತ್ ಗೆ ಗೊತ್ತಿತ್ತು. ಇದಕ್ಕೆ ಭಯಭೀತರಾಗಿದ್ದರು ಎಂದು ಸಿಬಿಐ ಅಂದಾಜಿಸಿದೆ. ದಿಶಾ ಸಾವಿನ ನಂತ್ರ ಸುಶಾಂತ್, ಲ್ಯಾಪ್ ಟಾಪ್, ಕ್ಯಾಮರಾ, ಹಾರ್ಡ್ ಡ್ರೈವ್ ಹುಡುಕಾಟ ನಡೆಸಿದ್ದರಂತೆ. ಸುಶಾಂತ್ ಎಲ್ಲ ಪಾಸ್ವರ್ಡ್ ರಿಯಾಗೆ ತಿಳಿದಿದ್ದ ಕಾರಣ ಅನೇಕ ಬಾರಿ ರಿಯಾಗೆ ಕರೆ ಮಾಡಿದ್ದರಂತೆ. ಆದ್ರೆ ರಿಯಾ ಫೋನ್ ರಿಸೀವ್ ಮಾಡದ ಕಾರಣ ಮತ್ತಷ್ಟು ಭಯಗೊಂಡಿದ್ದರಂತೆ.