ನವದೆಹಲಿ: ಎಲ್ಪಿಜಿ ರೀತಿಯಲ್ಲೇ ಗ್ರಾಹಕರಿಗೆ ನೇರವಾಗಿ ವಿದ್ಯುತ್ ಸಬ್ಸಿಡಿ ನೀಡುವ ನಿಯಮ ಜಾರಿಗೆ ತರಲಾಗುತ್ತಿದೆ.
ಕೇಂದ್ರ ಸರ್ಕಾರ ವಿದ್ಯುತ್ ಗ್ರಾಹಕರ ಹಕ್ಕು ನಿಯಮಾವಳಿ ಜಾರಿಗೆ ಸಿದ್ಧತೆ ನಡೆಸಿದೆ. ವಿದ್ಯುತ್ ಪಡೆಯುವುದು ಎಲ್ಲರ ಹಕ್ಕು ಆಗಲಿದ್ದು ಅರ್ಜಿ ಸಲ್ಲಿಸಿದ ನಿರ್ದಿಷ್ಟ ಸಮಯದೊಳಗೆ ಇಂಧನ ಇಲಾಖೆ ವಿದ್ಯುತ್ ಸಂಪರ್ಕ ನೀಡಬೇಕಿದೆ.
ಗ್ರಾಮೀಣ ಪ್ರದೇಶದಲ್ಲಿ ಅರ್ಜಿ ಸಲ್ಲಿಸಿದ 30 ದಿನದೊಳಗೆ ವಿದ್ಯುತ್ ಸಂಪರ್ಕ ನೀಡಬೇಕು. ಮೆಟ್ರೋ ನಗರದಲ್ಲಿ 7 ದಿನ ಮತ್ತು ಸ್ಥಳೀಯ ಸಂಸ್ಥೆ ಇರುವ ಪಟ್ಟಣಗಳಲ್ಲಿ 15 ದಿನದೊಳಗೆ ವಿದ್ಯುತ್ ಸಂಪರ್ಕ ನೀಡಬೇಕು.
ವಿದ್ಯುತ್ ಗ್ರಾಹಕರ ಹಕ್ಕು 2021 ನಿಯಮಾವಳಿಯನ್ನು ಕೇಂದ್ರ ಇಂಧನ ಇಲಾಖೆ ಪ್ರಕಟಿಸಲಿದೆ. ಕರಡು ನಿಯಮವಳಿ ರೂಪಿಸಿದ್ದು ಸೆಪ್ಟೆಂಬರ್ 30 ರೊಳಗೆ ಆಕ್ಷೇಪಣೆ ಸಲ್ಲಿಕೆಗೆ ಆಹ್ವಾನಿಸಲಾಗಿದೆ. ಎಲ್ಪಿಜಿ ರೀತಿಯಲ್ಲೇ ಗ್ರಾಹಕರ ಬ್ಯಾಂಕ್ ಖಾತೆಗೆ ನೇರ ವಿದ್ಯುತ್ ಸಬ್ಸಿಡಿ ಹಣ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.