
ಮುಂಬೈ: ಹಣ ವಿತ್ ಡ್ರಾ ಮಾಡಲು ಇನ್ನಮುಂದೆ ಓಟಿಪಿ ನಮೂದಿಸುವುದು ಕಡ್ಡಾಯವಾಗಿದೆ. ಡೆಬಿಟ್ ಕಾರ್ಡ್ ವಂಚನೆ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಓಟಿಪಿ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ 10 ಸಾವಿರ ರೂ.ಗೂ ಅಧಿಕ ಹಣ ವಿತ್ ಡ್ರಾ ಮಾಡಲು ಗ್ರಾಹಕರ ನೊಂದಾಯಿತ ಮೊಬೈಲಿಗೆ ಓಟಿಪಿ ಬರುತ್ತದೆ. ಅದನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ. ಸೆಪ್ಟೆಂಬರ್ 18 ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.