ಹೈದರಾಬಾದ್: ಕಿರುತೆರೆ ನಟಿ ಶ್ರಾವಣಿ ಕೊಂಡಪಲ್ಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಚಲನಚಿತ್ರ ನಿರ್ಮಾಪಕ ಅಶೋಕ್ ರೆಡ್ಡಿ ಹೈದರಾಬಾದ್ ಪೊಲೀಸರ ಎದುರು ಶರಣಾಗಿದ್ದಾರೆ.
ಶ್ರಾವಣಿ ಕೊಂಡಪಲ್ಲಿ ಆತ್ಮಹತ್ಯೆ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಅಶೋಕ್ ರೆಡ್ಡಿ ಪಂಜಾಗುಟ್ಟ ಎಸಿಪಿ ತಿರುಪತಣ್ಣ ಅವರ ಎದುರು ಹಾಜರಾಗಿದ್ದು ಅವರನ್ನು ವಶಕ್ಕೆ ಪಡೆಯಲಾಗಿದೆ. ಸೆಪ್ಟೆಂಬರ್ 8 ರಂದು ನಟಿ ಶ್ರಾವಣಿ ಹೈದರಾಬಾದ್ ನ ಮಧುರಾ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
26 ವರ್ಷದ ಶ್ರಾವಣಿ ಆತ್ಮಹತ್ಯೆಗೆ ದೇವರಾಜ್ ರೆಡ್ಡಿ ಮತ್ತು ಸಾಯಿ ಕೃಷ್ಣಾರೆಡ್ಡಿ ಹಾಗೂ ಅಶೋಕ್ ರೆಡ್ಡಿ ಕಾರಣವೆನ್ನಲಾಗಿದೆ. ಈ ಮೂವರು ಪೊಲೀಸರ ವಶದಲ್ಲಿದ್ದು ಇವರ ಕಿರುಕುಳದಿಂದ ಶ್ರಾವಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಪಶ್ಚಿಮ ಗೋದಾವರಿ ಜಿಲ್ಲೆಯ ಶ್ರಾವಣಿ ‘ಮನಸು ಮಮತಾ’ ಮತ್ತು ‘ಮೌನರಾಗಂ’ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದರು. ಆಕೆ ಆತ್ಮಹತ್ಯೆ ಮಾಡಿಕೊಂಡ ನಂತರ ಎಸ್ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.