ನವದೆಹಲಿ: ವಿಶ್ವದಲ್ಲೇ ಮೊದಲ ಕೊರೋನಾ ಲಸಿಕೆ ತಯಾರಿಸಿದ ರಷ್ಯಾ ಭಾರತಕ್ಕೆ 100 ಮಿಲಿಯನ್ ಡೋಸ್ ಲಸಿಕೆ ನೀಡಲಿದೆ.
ರಷ್ಯಾ ವಿಶ್ವದ ಮೊದಲ ಕೊರೋನಾ ಲಸಿಕೆ ‘ಸ್ಪುಟ್ನಿಕ್ V’ ಕಂಡುಹಿಡಿದಿದ್ದು, ಲಸಿಕೆಯ 10 ಕೋಟಿ ಡೋಸ್ ಭಾರತಕ್ಕೆ ಪೂರೈಕೆ ಮಾಡಲಾಗುವುದು.
ರಷ್ಯಾದ ರಾಷ್ಟ್ರೀಯ ಸಂಪತ್ತು ನಿಧಿಯಾಗಿರುವ ರಷ್ಯಾ ಡೈರೆಕ್ಟ್ ಇನ್ವೆಂಸ್ಟ್ ಮೆಂಟ್ ಫಂಡ್ ಈ ಕುರಿತಾಗಿ ಅಧಿಕೃತ ಘೋಷಣೆ ಮಾಡಿದ್ದು, ‘ಸ್ಪುಟ್ನಿಕ್ V’ ಲಸಿಕೆಯನ್ನು ಭಾರತದೊಂದಿಗೆ ಹಂಚಿಕೆ ಮಾಡಿಕೊಳ್ಳಲು ಡಾ. ರೆಡ್ಡಿಸ್ ಲ್ಯಾಬೋರೇಟರಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.