ದುಬೈ: ಕೊರೊನಾ ವೈರಸ್ ಋತುಮಾನಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ವೈರಸ್ ಆಗುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ.
ಜರ್ನಲ್ ಫ್ರೆಂಟಿಯರ್ಸ್ ಇನ್ ಪಬ್ಲಿಕ್ ಹೆಲ್ತ್ ಎಂಬ ಪತ್ರಿಕೆಯಲ್ಲಿ ಅಧ್ಯಯನದ ಪ್ರಬಂಧ ಪ್ರಕಟವಾಗಿದ್ದು ಸಮುದಾಯದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾದಂತೆ ಕೊರೊನಾ ವೈರಸ್ ಸೀಸನಲ್ ವೈರಸ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸಮಶೀತೋಷ್ಣವಲಯದಲ್ಲಿ ಇರುವ ದೇಶಗಳಲ್ಲಿ ಕೊರೊನಾ ಸೋಂಕು ಋತುಮಾನಕ್ಕೆ ತಕ್ಕಂತೆ ಬದಲಾವಣೆಯಾಗಬಹುದು. ಅಲ್ಲಿಯವರೆಗೂ ಎಲ್ಲಾ ಕಾಲದಲ್ಲಿಯೂ ವ್ಯಾಪಕವಾಗಿ ಕೊರೊನಾ ಹರಡಬಹುದಾಗಿದೆ ಎಂದು ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.