ವಿಶ್ವದ ಅತಿ ಜಾಣ ಗುಪ್ತಚರ ಇಲಾಖೆ ಎನಿಸಿಕೊಂಡಿರುವ ಅಮೆರಿಕದ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ ನೆಟ್ಟಿಗರಿಗೆ ನೀಡಿದ ಸ್ಪಾಟ್ ದಿ ಡಿಫರೆನ್ಸ್ ಪೋಸ್ಟ್ ಇದೀಗ ಭಾರಿ ವೈರಲ್ ಆಗಿದ್ದು, ಸಿಐಎಗೆ ಸವಾಲು ಹಾಕುವ ರೀತಿಯಲ್ಲಿ ನೆಟ್ಟಿಗರು ಉತ್ತರಿಸಿದ್ದಾರೆ.
ಇತ್ತೀಚಿಗೆ ಸಿಐಎ ತನ್ನ ಟ್ವೀಟರ್ ಖಾತೆಯಲ್ಲಿ ಹಾಕಿರುವ ಎರಡು ಚಿತ್ರಗಳಲ್ಲಿರುವ ವ್ಯತ್ಯಾಸವನ್ನು ಗುರುತಿಸುವಂತೆ ಚಾಲೆಂಜ್ ಹಾಕಿದ್ದು, ಈ ಫೋಟೋಗಳಲ್ಲಿರುವ 10 ವ್ಯತ್ಯಾಸವನ್ನು ಗುರುತಿಸುವಂತೆ ಹೇಳಿದೆ. ಆದರೆ ಸಿಐಎನ ಪೋಸ್ಟ್ಗೆ ನೆಟ್ಟಿಗರು ಭರ್ಜರಿ ಪ್ರತಿಕ್ರಿಯೆ ನೀಡಿದ್ದು, ಎಲ್ಲ ವ್ಯತ್ಯಾಸ ನೀಡಿದವರಿಗೆ ಸಿಎಐನಲ್ಲಿ ಕೆಲಸ ಕೊಡುವಿರಾ ಎಂದು ಪ್ರಶ್ನಿಸಿದ್ದಾರೆ.
ಸಿಐಎ 10 ವ್ಯತ್ಯಾಸ ಕೇಳಿದರೆ ನೆಟ್ಟಿಗರು 11ಕ್ಕಿಂತ ಹೆಚ್ಚು ವ್ಯತ್ಯಾಸವನ್ನು ಗುರುತಿಸಿದ್ದಾರೆ. ಸಿಐಎ ಒಂದು ದಿನ ಅವಕಾಶ ನೀಡಿದ್ದರೆ, ಅನೇಕರು ಕೆಲವೇ ನಿಮಿಷದಲ್ಲಿ ಇದಕ್ಕೆ ಉತ್ತರಿಸುವ ಮೂಲಕ ಸಿಐಎಗೆ ಚಮಕ್ ನೀಡಿದ್ದಾರೆ. ಇದೀಗ ಈ ಪೋಸ್ಟ್ ಭಾರಿ ವೈರಲ್ ಆಗಿದೆ.