alex Certify ಮದುವೆಗೆ ಹೋಗುವಾಗ ಬಂದ ಕರೆಗೆ ಸ್ಪಂದಿಸಿ ಸೀರೆಯುಟ್ಟೆ ಹಾವು ಹಿಡಿದ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ಹೋಗುವಾಗ ಬಂದ ಕರೆಗೆ ಸ್ಪಂದಿಸಿ ಸೀರೆಯುಟ್ಟೆ ಹಾವು ಹಿಡಿದ ಮಹಿಳೆ…!

ನೀವು ಹಾವು ಹಿಡಿಯುವವರಾಗಿದ್ದಲ್ಲಿ ನಿಮ್ಮನ್ನು ಯಾವಾಗ ಬೇಕಾದರೂ ಸಹ ಅವುಗಳನ್ನು ಹಿಡಿಯಲೆಂದು ಜನರು ಕರೆಯಬಹುದು. ಮದುವೆಯೊಂದರಲ್ಲಿ ಭಾಗಿಯಾಗಲು ಹೊರಟಿದ್ದ ಹಾವಾಡಗಿತ್ತಿಯೊಬ್ಬರಿಗೆ ಹಾವು ಹಿಡಿಯಲು ಮನೆಯೊಂದರಿಂದ ಕರೆ ಬಂದಿದೆ.

ಆಕೆ ಬಂದು ಆ ಹಾವನ್ನು ರಕ್ಷಿಸುವ ವಿಡಿಯೋ ವೈರಲ್ ಆಗಿದೆ. ವಿರಾಟ್ ಭಾಗನಿ ಹೆಸರಿನ ಈ ಮಹಿಳೆ ಸೀರೆಯುಟ್ಟುಕೊಂಡಿದ್ದಾಗಲೇ ಬರಿಗೈನಲ್ಲಿ ನಾಗರ ಹಾವನ್ನು ಹಿಡಿಯುವ ವಿಡಿಯೋ ವೈರಲ್ ಆಗಿದೆ. ಒಂದು ಕೈಯಲ್ಲಿ ಫೋನ್ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಕೋಲೊಂದನ್ನು ಹಿಡಿದು ಕಬೋರ್ಡ್ ಹಿಂದೆ ಇದ್ದ ಹಾವನ್ನು ಹಿಡಿದಿದ್ದಾರೆ.

ಸೀರೆಯುಟ್ಟುಕೊಂಡಿದ್ದ ಕಾರಣ ತನಗೆ ಹಾವು ಹಿಡಿಯುವುದು ಬಹಳ ಕಷ್ಟವಾದರೂ ಸಹ ಹಿಡಿಯಲು ಸಫಲಳಾಗಿದ್ದಾಗಿ ಅವರು ತಿಳಿಸಿದ್ದಾರೆ.

https://twitter.com/DoctorAjayita/status/1304779562945933313?ref_src=twsrc%5Etfw%7Ctwcamp%5Etweetembed%7Ctwterm%5E1304779562945933313%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fsnake-catcher-dressed-for-a-wedding-goes-to-rescue-cobra-watch-viral-video%2F652993

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...