ಸರ್ಕಾರದ ಕಠಿಣ ಕಾನೂನುಗಳ ನಡುವೆಯೂ ಒಂಟಿ ಮಹಿಳೆಯರಿಗೆ ಕಾಮುಕರು ಕಾಟ ಕೊಡುವುದು ತಪ್ಪುತ್ತಿಲ್ಲ. ಆದರೆ ಭದ್ರತೆ ಹೊಂದಿರುವ ಸಂಸದೆಗೂ ಸಹ ಇದರ ಅನುಭವವಾಗಿದ್ದು, ಇದೀಗ ಕಿರುಕುಳ ನೀಡಿದ ವ್ಯಕ್ತಿ ಅಂದರ್ ಆಗಿದ್ದಾನೆ.
ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ಟಿಎಂಸಿ ಸಂಸದೆ ಹಾಗೂ ನಟಿ ಮಿಮಿ ಚಕ್ರವರ್ತಿ ಜಿಮ್ ಮುಗಿಸಿ ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಕಾರಿನಲ್ಲಿ ಹೋಗುವಾಗ ಟ್ಯಾಕ್ಸಿ ಚಾಲಕ ದೇವ್ ಯಾದವ್ ಎಂಬಾತ ಹಿಂಬಾಲಿಸಿಕೊಂಡು ಹೋಗಿದ್ದಾನೆ.
ಕೊನೆಗೆ ಸರ್ಕಲ್ ಬಳಿ ಗ್ಲಾಸ್ ಇಳಿಸಿದ ವೇಳೆ ಅಶ್ಲೀಲ ಸನ್ನೆ ಮಾಡಿದ್ದಾನೆ. ಇದರಿಂದ ರೋಸಿಹೋದ ಮಿಮಿ ಚಕ್ರವರ್ತಿ ಆತನನ್ನ ಟ್ಯಾಕ್ಸಿಯಿಂದ ಹೊರಗೆಳೆದು ಎಚ್ಚರಿಕೆ ನೀಡಿದ್ದಾರೆ. ಆಗ ಪರಾರಿಯಾಗಿದ್ದ ಟ್ಯಾಕ್ಸಿ ಚಾಲಕನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.