ಕೊರೊನಾ ಮಧ್ಯೆ ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಎಚ್.ಡಿ.ಎಫ್.ಸಿ. ಗ್ರಾಹಕರಿಗೆ ಉಡುಗೊರೆ ನೀಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಎಂಸಿಎಲ್ಆರ್ ದರವನ್ನು ಶೇಕಡಾ 0.55 ರಷ್ಟು ಇಳಿಸಿ ಶೇಕಡಾ 7.55 ಕ್ಕೆ ನಿಗದಿಪಡಿಸಿದೆ. ಈ ದರಗಳನ್ನು ಸೆಪ್ಟೆಂಬರ್ 11 ರಂದು ಘೋಷಣೆ ಮಾಡಲಾಗಿದೆ.
ಎಚ್.ಡಿ.ಎಫ್.ಸಿ. ಈ ನಿರ್ಧಾರದಿಂದ ಸಾಲವು ಅಗ್ಗವಾಗಲಿದೆ. ಇದನ್ನು ಸಾಲದ ಕನಿಷ್ಠ ಬಡ್ಡಿದರ ಎಂದು ಪರಿಗಣಿಸಲಾಗುತ್ತದೆ. ಸೆಪ್ಟೆಂಬರ್ 15 ರಿಂದ ಈ ದರಗಳು ಜಾರಿಗೆ ಬಂದಿವೆ. ಒಂದು ವರ್ಷದ ಸಾಲಕ್ಕೆ ಎಂಸಿಎಲ್‌ಆರ್ ಅನ್ನು ಶೇಕಡಾ 7.15 ರಿಂದ ಶೇಕಡಾ 7.10 ಕ್ಕೆ ಇಳಿಸಿದೆ.
ಒಂದು ದಿನ ಮತ್ತು ಒಂದು ತಿಂಗಳ ಸಾಲಗಳ ಎಂಸಿಎಲ್ಆರ್ ದರವನ್ನು ಶೇಕಡಾ 6.55 ಕ್ಕೆ ಇಳಿಸಿದೆ. ಇದು ಮೊದಲು ಶೇಕಡಾ 6.60 ರಷ್ಟಿತ್ತು. ಮೂರು ತಿಂಗಳ ಮತ್ತು ಆರು ತಿಂಗಳ ಅವಧಿಯ ಸಾಲದ ಮೇಲಿನ ಬ್ಯಾಂಕ್ ಎಂಸಿಎಲ್ಆರ್ ಯನ್ನು ಕಡಿಮೆ ಮಾಡಿದೆ. ಈ ಅವಧಿಗಳ ಸಾಲದ ದರಗಳು ಈಗ ಕ್ರಮವಾಗಿ ಶೇಕಡಾ 6.85 ಮತ್ತು ಶೇಕಡಾ 7 ರಷ್ಟಾಗಲಿವೆ.