alex Certify ATM ಗ್ರಾಹಕರೇ ಗಮನಿಸಿ: ಸೆ.18 ರ ನಂತ್ರ ಬದಲಾಗಲಿದೆ ವಿತ್ ಡ್ರಾ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ATM ಗ್ರಾಹಕರೇ ಗಮನಿಸಿ: ಸೆ.18 ರ ನಂತ್ರ ಬದಲಾಗಲಿದೆ ವಿತ್ ಡ್ರಾ ನಿಯಮ

ಎಟಿಎಂ ವಂಚನೆ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಹಣ ವಿತ್ ಡ್ರಾ ನಿಯಮದಲ್ಲಿ ಬದಲಾವಣೆ ಮಾಡಿದೆ. ಎಟಿಎಂಗಳಲ್ಲಿ 24 × 7 ಒನ್ ಟೈಮ್ ಪಾಸ್ವರ್ಡ್ ಆಧಾರಿತ ಎಟಿಎಂ ವಿತ್ ಡ್ರಾ ಸೌಲಭ್ಯವನ್ನು ಜಾರಿಗೆ ತರಲು ಎಸ್‌ಬಿಐ ನಿರ್ಧರಿಸಿದೆ. ಈ ಸೌಲಭ್ಯ ಸೆಪ್ಟೆಂಬರ್ 18 ರಿಂದ ದೇಶದ ಎಲ್ಲ ಎಸ್‌ಬಿಐ ಎಟಿಎಂಗಳಲ್ಲಿ ಅನ್ವಯವಾಗಲಿದೆ.

ರಾತ್ರಿಯ ಸಮಯದಲ್ಲಿ ಎಟಿಎಂ ವಂಚನೆಯನ್ನು ತಪ್ಪಿಸಲು ಎಸ್‌ಬಿಐ, ಜನವರಿ 1 ರಿಂದ ಒಟಿಪಿ ಆಧಾರಿತ ಎಟಿಎಂ ಹಣ ವಿತ್ ಡ್ರಾ ಸೌಲಭ್ಯವನ್ನು ಪರಿಚಯಿಸಿತ್ತು. ಇದರ ಪ್ರಕಾರ, ಎಸ್‌ಬಿಐ ಎಟಿಎಂನಿಂದ ರಾತ್ರಿ 8 ರಿಂದ ಬೆಳಿಗ್ಗೆ 8 ರವರೆಗೆ 10,000 ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡಲು ಒಟಿಪಿ ಅಗತ್ಯವಿತ್ತು. ಇನ್ಮುಂದೆ ಇಡೀ ದಿನ ಎಟಿಎಂ ವಿತ್ ಡ್ರಾಗೆ ಒಟಿಪಿ ಅನಿವಾರ್ಯವಾಗಲಿದೆ.

ಈ ಸೌಲಭ್ಯವು ಎಸ್.ಬಿ.ಐ. ಎಟಿಎಂನಲ್ಲಿ ಮಾತ್ರ ಲಭ್ಯವಿರಲಿದೆ. ಎಟಿಎಂ ನಲ್ಲಿ ವಿತ್ ಡ್ರಾ ಹಣ ಟೈಪ್ ಮಾಡ್ತಿದ್ದಂತೆ ಸ್ಕ್ರೀನ್ ಮೇಲೆ ಒಟಿಪಿ ಕೇಳುತ್ತದೆ. ಮೊಬೈಲ್ ನಂಬರ್ ಗೆ ಬಂದ ಒಟಿಪಿ ಟೈಪ್ ಮಾಡಿದ ನಂತ್ರ ಹಣ ವಿತ್ ಡ್ರಾ ಮಾಡಬಹುದಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...