ನವದೆಹಲಿ: ಗಾಳಿಯೊಂದಿಗೆ ಸಣ್ಣ ಕಣಗಳ ಮೂಲಕ ರೋಗ ಹರಡುವುದನ್ನು ವಾಯುಗಾಮಿ ಪ್ರಸರಣವೆಂದು ಕರೆಯಲಿದ್ದು, ಕೊರೊನಾ ಸೋಂಕು ಹೀಗೆ ವಾಯುಗಾಮಿ ಪ್ರಸರಣದ ಮೂಲಕ ಹರಡಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇಲಾಖೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ತಿಳಿಸಿದ್ದಾರೆ. ಸಂಸತ್ ಅಧಿವೇಶನದಲ್ಲಿ ಅವರು ಈ ಕುರಿತಾಗಿ ಮಾತನಾಡಿ, ವೈದ್ಯಕೀಯ ವಿಧಾನ ವೇಳೆ ಉತ್ಪಾದನೆಯಾಗುವ ಸಣ್ಣ ಹನಿಗಳ ಮೂಲಕವೂ ಕೊರೋನಾ ಹರಡಬಹುದಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಇರುವ ಕೊರೊನಾ ಸಕ್ರಿಯ ಪ್ರಕರಣಗಳ ಪೈಕಿ ಶೇಕಡ 77 ರಷ್ಟು ಪ್ರಕರಣಗಳು 10 ರಾಜ್ಯಗಳಲ್ಲಿವೆ. ಮಹಾರಾಷ್ಟ್ರ, ಕರ್ನಾಟಕ, ಉತ್ತರಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ಮೊದಲಾದ ರಾಜ್ಯಗಳಲ್ಲಿ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಪರಿಣಾಮಕಾರಿ ಮತ್ತು ಸುರಕ್ಷಿತವಾದ ಲಸಿಕೆ ಶೀಘ್ರವೇ ಲಭ್ಯವಾಗುವಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.