alex Certify ಈ ಪ್ರಾಣಿ ಪ್ರೀತಿಗೆ ಏನು ಹೇಳುವುದು ನೀವೇ ಹೇಳಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಪ್ರಾಣಿ ಪ್ರೀತಿಗೆ ಏನು ಹೇಳುವುದು ನೀವೇ ಹೇಳಿ…!

ಟರ್ಕಿಯ ಬೀದಿಬದಿ ನಾಟಕವೊಂದು ನಡೆಯುತ್ತಿರುತ್ತದೆ. ಪಾತ್ರಧಾರಿಯೊಬ್ಬ ಗಾಯಗೊಂಡು ಅಸ್ವಸ್ಥನಾದವನಂತೆ ನಟಿಸುತ್ತಾನೆ. ಇದನ್ನು ಕಂಡ ಅಲ್ಲೇ ಇದ್ದ ಬೀದಿನಾಯಿ ಆತನ ಆರೈಕೆಗೆ ಮುಂದಾಗುತ್ತದೆ.

ಪ್ರಾಣಿಗಳೇ ಹಾಗೆ. ಅವು ತೋರುವಷ್ಟು ಕಾಳಜಿಯನ್ನೂ ಕೆಲವೊಮ್ಮೆ ಮನುಷ್ಯ ತೋರಲಾರ. ಸಾಕುಪ್ರಾಣಿಗಳೇನೋ ಅನ್ನ ಹಾಕಿದವನಿಗೆ ನಿಷ್ಠೆಯಿಂದ ಇರುತ್ತವೆ. ಆದರೆ, ಬೀದಿನಾಯಿಯ ಪ್ರೀತಿ ಕಂಡು ನೆಟ್ಟಿಗರೂ ಫಿದಾ ಆಗಿದ್ದಾರೆ‌.

ನಟ ನ್ಯೂಮನ್ ಎರ್ಟುಗ್ರಲ್ ಯುಜುನ್ಸಾಯ್ ಪಾತ್ರವನ್ನು ನಿರ್ವಹಿಸುತ್ತಿರುತ್ತಾರೆ. ಅನಾರೋಗ್ಯದಿಂದ ಕುಸಿದು ಬೀಳುವ ರೀತಿ ನಟಿಸುತ್ತಾರೆ. ಸಹನಟರು ಆತನನ್ನ ಅಲ್ಲೇ ಮಲಗಿಸಿ ಹಿಂದೆ ಸರಿಯುತ್ತಾರೆ.

ತಕ್ಷಣವೇ ಓಡೋಡಿ ಬರುವ ಬೀದಿನಾಯಿ, ನ್ಯೂಮನ್ ನ ಎದೆ ಮೇಲೆ ಹೊರಳಾಡಲು ಆರಂಭಿಸುತ್ತದೆ. ಮುಖವನ್ನ ಆತನ ಮುಂದಿಟ್ಟು, ನೆಕ್ಕಲು ಶುರು ಮಾಡುತ್ತದೆ. ಸಹನಟರೆಲ್ಲ ಬಂದು ನಾಯಿಯನ್ನು ಹಿಂದೆ ಎಳೆಯಲೂ ಯತ್ನಿಸಿದರೂ ನ್ಯೂಮನ್ ಏಳುವವರೆಗೆ ಅದು ಕಾಳಜಿ, ಪ್ರೀತಿ ತೋರುವುದನ್ನು ನಿಲ್ಲಿಸುವುದಿಲ್ಲ.

https://www.facebook.com/kocaelivizyon/videos/316174569828687

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...