alex Certify ಮಾಡಿ ನೋಡಿ ‘ಹಾಗಲಕಾಯಿ’ ಟೀ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಡಿ ನೋಡಿ ‘ಹಾಗಲಕಾಯಿ’ ಟೀ

ಹಾಗಲಕಾಯಿ ಹೆಸರು ಕೇಳಿದ ತಕ್ಷಣ ದೂರ ಓಡುವವರೇ ಹೆಚ್ಚು. ಇದರ ಮಧ್ಯೆ ಹಾಗಲಕಾಯಿಯಲ್ಲಿರುವ ಉತ್ತಮ ಅಂಶಗಳು ದೇಹಕ್ಕೆ ಸಿಗದೇ ಉಳಿಯಬಹುದು.

ನಾಲಿಗೆ ರುಚಿಯ ಮಾತು ಕೇಳದೆ ಆರೋಗ್ಯದ ದೃಷ್ಟಿಯಿಂದ ಆಲೋಚಿಸಿ ಹಾಗಲಕಾಯಿ ಸೇವಿಸಿ. ಡಯಾಬಿಟೀಸ್ ನಿಯಂತ್ರಣಕ್ಕೆ ಹಾಗಲಕಾಯಿ ಟೀ ಬಹಳ ಒಳ್ಳೆಯದು.

ಇದರಲ್ಲಿರುವ ಪಾಲಿಪೆಪ್ಟೈಡ್ ಪಿ ಎಂಬ ಅಂಶ ಇನ್ಸುಲಿನ್ ನ ಪ್ರಯೋಜನಗಳನ್ನೇ ಕೊಡುತ್ತದೆ. ಇದು ರಕ್ತದ ಸಕ್ಕರೆಯ ಅಂಶವನ್ನು ಬೊಜ್ಜಾಗಲು ಬಿಡದೆ ಎನರ್ಜಿಯಾಗಿ ಬದಲಾಯಿಸುತ್ತದೆ.

ಕೊಲೆಸ್ಟ್ರಾಲ್ ಇರುವವರಿಗೂ ಹಾಗಲ ಟೀ ಒಳ್ಳೆಯದೇ. ಹಾಗಲಕಾಯಿಯ ಗೊಜ್ಜು, ಮೆಣಸ್ಕಾಯಿ, ಚಟ್ನಿ, ತಂಬುಳಿಗಳನ್ನು ನೀವೆಲ್ಲಾ ಸೇವಿಸಿರಬಹುದು. ಇದೇನಿದು ಹಾಗಲಕಾಯಿ ಟೀ ಎಂದಿರೇ. ಹಾಗಲಕಾಯಿಯನ್ನು ಸ್ವಚ್ಛವಾಗಿ ತೊಳೆದು ಬಿಸಿಲಲ್ಲಿ ಐದರಿಂದ ಆರು ದಿನ ಒಣಗಿಸಿ. ಇದನ್ನು ಮಿಕ್ಸಿಗೆ ಹಾಕಿ ರುಬ್ಬಿ ತೆಗೆದಿಟ್ಟುಕೊಳ್ಳಿ.

ಚಹಾ ತಯಾರಿಸುವಾಗ ಕುದಿಯುವ ನೀರಿಗೆ ಸ್ವಲ್ಪ ಹಾಗಲಕಾಯಿ ಪುಡಿ ಹಾಕಿ. ಚೆನ್ನಾಗಿ ಕುದಿದ ಬಳಿಕ ಉರಿ ನಂದಿಸಿ. ಸ್ವಲ್ಪ ನಿಂಬೆರಸ, ಜೇನುತುಪ್ಪ ಹಾಕಿ ಕುಡಿಯಿರಿ. ಬಿಸಿ ಬೇಡ ಎನ್ನುವವರು ಜ್ಯೂಸ್ ರೂಪದಲ್ಲೂ ಸೇವಿಸಬಹುದು. ಇದಕ್ಕೆ ಒಳಗಿನ ಬೀಜ ತೆಗೆದು ಹೊರಗಿನ ಭಾಗವನ್ನು ಮಿಕ್ಸಿಯಲ್ಲಿ ರುಬ್ಬಿ ಸೋಸಿ. ರಸಕ್ಕೆ ಜೇನುತುಪ್ಪ ಇಲ್ಲವೇ, ಸೇಬು ಹಣ್ಣಿನ ರಸದೊಂದಿಗೆ ಬೆರೆಸಿ ಕುಡಿಯಬಹುದು.

ಕೊಲೆಸ್ಟ್ರಾಲ್ ಹೆಚ್ಚಿರುವವರು ಇದನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳೂ ದೂರವಾಗುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...