ಜನಸಾಮಾನ್ಯರಿಗೆ ಅಕ್ಟೋಬರ್ ನಲ್ಲಿ ಶಾಕ್ ಕಾದಿದೆ. ಟಿವಿ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ಕಳೆದ ವರ್ಷ ಮುಕ್ತ ಮಾರಾಟ ಫಲಕ ಮೇಲೆ ಶೇಕಡಾ 5ರಷ್ಟು ಆಮದು ಸುಂಕದ ರಿಯಾಯತಿಯನ್ನು ನೀಡಲಾಗಿತ್ತು. ಇದು ಈ ತಿಂಗಳು ಮುಕ್ತಾಯಗೊಳ್ಳಲಿದೆ.
ಟೆಲಿವಿಷನ್ ಉದ್ಯಮವು ಈಗಾಗಲೇ ಸಂಕಷ್ಟದಲ್ಲಿದೆ. ಟಿವಿ ತಯಾರಿಸುವ ಫಲಕವೊಂದರ ಬೆಲೆ ಶೇಕಡಾ 50ರಷ್ಟು ಹೆಚ್ಚಾಗಿದೆ. ವರದಿ ಪ್ರಕಾರ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಆಮದು ಸುಂಕದ ರಿಯಾಯಿತಿಯನ್ನು ವಿಸ್ತರಿಸಲು ಆಸಕ್ತಿ ಹೊಂದಿದೆ ಎನ್ನಲಾಗಿದೆ. ಆಮದು ಸುಂಕ ರಿಯಾಯಿತಿ ಟಿವಿ ಉತ್ಪಾದನೆಯಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಸಹಾಯ ಮಾಡಿದೆ. ಇದರ ಪರಿಣಾಮವಾಗಿ, ದಕ್ಷಿಣ ಕೊರಿಯಾದ ಕಂಪನಿ ಸ್ಯಾಮ್‌ಸಂಗ್ ಈಗ ವಿಯೆಟ್ನಾಂನಿಂದ ತನ್ನ ಉತ್ಪಾದನಾ ವ್ಯವಹಾರವನ್ನು ಕ್ರೊಢೀಕರಿಸುವ ಮೂಲಕ ಭಾರತದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಲಿದೆ. ಆದ್ರೆ ರಿಯಾಯಿತಿ ವಿಸ್ತರಿಸುವ ಅಂತಿಮ ನಿರ್ಧಾರ ಹಣಕಾಸು ಸಚಿವಾಲಯದ ಮುಂದಿದೆ.
ರಿಯಾಯಿತಿ ಈ ತಿಂಗಳು ಕೊನೆಗೊಂಡಲ್ಲಿ ಟಿವಿ ಕಂಪನಿಗಳಿಗೆ ಬೆಲೆ ಹೆಚ್ಚಳ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಎಲ್ಜಿ, ಪ್ಯಾನಾಸೋನಿಕ್, ಥಾಮ್ಸನ್ ಮತ್ತು ಸಾನ್ಸುಯಿ ಮುಂತಾದ ಬ್ರಾಂಡ್‌ಗಳು ಬೆಲೆ ಏರಿಸಲಿವೆ. ಟಿವಿ ಬೆಲೆಗಳು ಸುಮಾರು ಶೇಕಡಾ 4 ರಷ್ಟು ಹೆಚ್ಚಾಗುತ್ತವೆ. 32 ಇಂಚಿನ ಟಿವಿ ಕನಿಷ್ಠ 600 ರೂಪಾಯಿ ಮತ್ತು 42 ಇಂಚು ಮತ್ತು ಅದಕ್ಕಿಂತ ದೊಡ್ಡ ಟಿವಿ ಬೆಲೆ 1200-1500 ರೂಪಾಯಿ ಹೆಚ್ಚಾಗಲಿದೆ.