ಸ್ಪಾಟ್ ಫಿಕ್ಸಿಂಗ್ ಆರೋಪದಡಿ 7 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ವೇಗಿ ಶ್ರೀಶಾಂತ್ ಅವರ ಶಿಕ್ಷೆ ಅಂತ್ಯಗೊಂಡಿದೆ. 2013ರ ಐಪಿಎಲ್ ಟೂರ್ನಿಯಲ್ಲಿನ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಇವರಿಗೆ ಬಿಸಿಸಿಐ ಶಿಕ್ಷೆ ವಿಧಿಸಿತ್ತು. ಇದೀಗ ಆ ಶಿಕ್ಷೆ ಪೂರ್ಣಗೊಂಡಿದೆ. ಶ್ರೀಶಾಂತ್ ಶಿಕ್ಷೆ ಪೂರ್ಣಗೊಳ್ಳುತ್ತಲೇ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಮತ್ತೆ ಕ್ರಿಕೆಟ್ನಲ್ಲಿ ತೊಡಗಿಕೊಳ್ಳೋ ವಿಶ್ವಾಸ ಹಾಗೂ ಹುಮ್ಮಸ್ಸಿನಲ್ಲಿರುವ ಶ್ರೀಶಾಂತ್, ಟ್ವಿಟ್ಟರ್ನಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಸೆಕೆಂಡ್ ಸೆಲ್ಫ್ ಎಂದು ಬರೆದುಕೊಳ್ಳುವ ಮೂಲಕ ಮತ್ತೆ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕ್ರಿಕೆಟ್ ಪಂದ್ಯಾವಳಿಗೆ ಭಾಗವಹಿಸಲು ಅಭ್ಯಾಸ ಕೂಡ ಮುಂದುವರೆಸಿದ್ದಾರೆ.
ಇನ್ನು ಶ್ರೀಶಾಂತ್ 7 ವರ್ಷದ ನಿಷೇಧದ ಅವಧಿಯಲ್ಲಿ ಸುಮ್ಮನೆ ಇರಲಿಲ್ಲ. ಹಲವಾರು ಸಿನಿಮಾಗಳಲ್ಲಿ ನಟಿಸಿದರು. ಕ್ರಿಕೆಟ್ ಜಗತ್ತು ಅಷ್ಟೆ ಅಲ್ಲದೆ ಸಿನಿಮಾ ಜಗತ್ತಿನಲ್ಲೂ ಹೆಸರು ಪಡೆದರು. ಇನ್ನು ರಾಜಕೀಯ ಜಗತ್ತಿಗೂ ಕಾಲಿಟ್ಟ ಶ್ರೀಶಾಂತ್ ರಾಜಕೀಯದಲ್ಲಿ ಸೋಲುಂಡರು. ಇದೀಗ ಮತ್ತೆ ಕ್ರಿಕೆಟ್ ಜಗತ್ತಿನಲ್ಲಿ ಎರಡನೇ ಇನ್ನಿಂಗ್ಸ್ ಪ್ರಾರಂಭಿಸುತ್ತಿದ್ದಾರೆ.