ತನ್ನ ಗ್ರಾಮದ ಬಳಿ ಇರುವ ಬೆಟ್ಟದ ಸಾಲುಗಳಿಂದ ಇಳಿದು ಬರುವ ಮಳೆ ನೀರನ್ನು ಕೃಷಿ ಭೂಮಿಗೆ ತಿರುಗಿಸಿಕೊಳ್ಳಲು ಬಿಹಾರದ ವ್ಯಕ್ತಿಯೊಬ್ಬರು 30 ವರ್ಷದ ಪರಿಶ್ರಮದಿಂದ ಮೂರು ಕಿಮೀ ಉದ್ದದ ಕಾಲುವೆಯನ್ನು ನಿರ್ಮಿಸಿದ್ದಾರೆ.
ಗಯಾ ಬಳಿಕ ಲಾಥುವಾದ ಕೋತಿವಾಲಾ ಪ್ರದೇಶದ ಲೌಂಗಿ ಭುಯಾನ್ ತಮ್ಮ ಸಾಧನೆಯ ಬಗ್ಗೆ ಮಾತನಾಡುತ್ತಾ, “ಗ್ರಾಮದಲ್ಲಿರುವ ಕೊಳವೊಂದಕ್ಕೆ ನೀರನ್ನು ಹೊತ್ತೊಯ್ಯಬಲ್ಲ ಈ ಕಾಲುವೆಯನ್ನ ನಿರ್ಮಾಣ ಮಾಡಲು ನನಗೆ 30 ವರ್ಷಗಳು ಹಿಡಿದವು. ಕಳೆದ 30 ವರ್ಷಗಳಿಂದ ನಾನು ಹತ್ತಿರದ ಕಾಡಿಗೆ ಹೋಗಿ ನನ್ನ ಜಾನುವಾರುಗಳನ್ನು ಮೇಯಲು ಬಿಟ್ಟು, ಕಾಲುವೆ ನಿರ್ಮಿಸಲು ಮುಂದಾದೆ. ನನ್ನ ಈ ಸಾಹಸಕ್ಕೆ ಯಾರೂ ಕೈಜೋಡಿಸಲಿಲ್ಲ. ಜೀವನೋಪಾಯ ಅರಸಿಕೊಂಡು ಗ್ರಾಮಸ್ಥರೆಲ್ಲಾ ನಗರಗಳತ್ತ ಹೋಗುತ್ತಿದ್ದಾರೆ. ನಾನು ಊರಿನಲ್ಲೇ ಉಳಿದುಕೊಳ್ಳಲು ನಿರ್ಧರಿಸಿದೆ” ಎಂದು ತಿಳಿಸಿದ್ದಾರೆ.
ಭುಯಾನ್‌ರ ಈ ಸಾಧನೆಯಿಂದ ಆ ಗ್ರಾಮದ ಜಾನುವಾರುಗಳಿಗೆ ಹಾಗೂ ಕೃಷಿ ಭೂಮಿಗೆ ನೀರಿನ ವ್ಯವಸ್ಥೆ ಆಗಿದ್ದು, ಅವರು ಸರ್ವರ ಒಳಿತಿಗೆ ನಿಸ್ವಾರ್ಥ ಸೇವೆಯಲ್ಲಿ ತೊಡಗಿದ್ದಾರೆ ಎಂದು ಸ್ಥಳೀಯ ಪಟ್ಟಿ ಮಾಂಝಿ ತಿಳಿಸಿದ್ದಾರೆ.
ಮಾವೋಗಳ ಅಡಗುತಾಣಗಳಲ್ಲಿ ಒಂದಾದ ಈ ಊರಿನಲ್ಲಿ ಕೃಷಿ ಹಾಗೂ ಪಶುಸಂಗೋಪನೆಗಳೇ ಜನರ ಜೀವನೋಪಾಯವಾಗಿವೆ.