
ಅಂತಾಷ್ಟ್ರೀಯ ಮಟ್ಟದ ಮಾಲಿನ್ಯ ನಿಯಂತ್ರಣ ಹಾಗೂ ಸುರಕ್ಷತಾ ಮಾನದಂಡಗಳನ್ನು ವಾಹನಗಳಲ್ಲಿ ಕಡ್ಡಾಯಗೊಳಿಸಲು ಕೇಂದ್ರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಮುಂದಾಗಿದೆ.
ಏಪ್ರಿಲ್ 2023 ರಿಂದ ಜಾರಿಗೆ ಬರುವಂತೆ ಎಲೆಕ್ಟ್ರಾನಿಕ್ ಸ್ಟಬಿಲಿಟಿ ನಿಯಂತ್ರಣ ವ್ಯವಸ್ಥೆಯನ್ನು (ESC) ಕಡ್ಡಾಯವಾಗಿ ಅಳವಡಿಸುವ ಸಂಬಂಧ ಕರಡು ಪ್ರಸ್ತಾವನೆಯೊಂದನ್ನು ಹೊರತಂದಿರುವುದಾಗಿ ಸಚಿವಾಲಯವು ತಿಳಿಸಿದೆ. ಎಲ್ಲಾ ವಾಹನಗಳಿಗೂ ಉತ್ಕೃಷ್ಟ ಮಟ್ಟದ ಸುರಕ್ಷತಾ ಮಾನದಂಡಗಳನ್ನು ಕಡ್ಡಾಯ ಮಾಡುವುದಾಗಿ ಸಚಿವಾಲಯ ತಿಳಿಸಿದೆ.
ಇವುಗಳೊಂದಿಗೆ ಚಕ್ರಗಳಲ್ಲಿರುವ ಗಾಳಿಯ ಒತ್ತಡದ ವೀಕ್ಷಣಾ ವ್ಯವಸ್ಥೆ (TPMS)ನಂಥ ಅಂತಾರಾಷ್ಟ್ರೀಯ ಮಟ್ಟದ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸಲು ಸಚಿವಾಲಯ ಮುಂದಾಗಿದ್ದು, ಇವುಗಳಲ್ಲಿ ಕೆಲವು ಮುಂದಿನ ತಿಂಗಳಿನಿಂದಲೇ ಜಾರಿಗೆ ಬರುವ ಸಾಧ್ಯತೆ ಇದೆ.
ದೇಶದ ಆರ್ಥಿಕಾಭಿವೃದ್ಧಿಗೆ ಪೂರಕವಾಗಿ ಆಟೋಮೊಬೈಲ್ ಕ್ಷೇತ್ರವನ್ನು ಮಾರ್ಪಾಡುಗೊಳಿಸುವ ನಿಟ್ಟಿನಲ್ಲಿ, ಈ ಮಾರ್ಗಸೂಚಿಗಳನ್ನು ಜಾಗತಿಕ ಮಾನದಂಡಗಳಿಗೆ ಸಮನಾಗಿ ತರಲು ಸರ್ಕಾರ ಚಿಂತನೆ ಮಾಡಿದೆ.
ಇತ್ತೀಚೆಗೆ BS6 ಎಮಿಷನ್ ಮಾನದಂಡವನ್ನು ಅಳವಡಿಸಿಕೊಂಡಿರುವ ಭಾರತವು ಸಾರಿಗೆ ಮಾಲಿನ್ಯ ನಿಯಂತ್ರಣದ ವಿಚಾರದಲ್ಲಿ ಜಪಾನ್, ಅಮೆರಿಕ, ಯೂರೋಪ್‌ಗಳ ಸಮಕ್ಕೆ ಬಂದಿದೆ.