ಚೀನಾದ ಡಾಲಿಯನ್ ಸಮುದ್ರದಲ್ಲಿ ಇತ್ತೀಚೆಗೆ ಬೃಹದಾಕಾರದ ವಾಟರ್ ಸ್ಪೌಟ್ ಕಾಣಿಸಿಕೊಂಡಿದ್ದು, ಇದೀಗ ಈ ವಿಡಿಯೊ ಭಾರಿ ವೈರಲ್ ಆಗಿದೆ.
ವಾಟರ್ ಸ್ಪೌಟ್ ಅಂದರೆ ಸಮುದ್ರದ ಮೇಲೆ ಸುಂಟರಗಾಳಿ ಕಾಣಿಸಿಕೊಂಡು ಇದರಿಂದ ನೀರು ಮೇಲಕ್ಕೆ ಕಾರಂಜಿಯ ರೀತಿ ಏಳುತ್ತದೆ. ಚೀನಾದ ಸಮುದ್ರದಲ್ಲಿಯೂ ಈ ಪ್ರಕ್ರಿಯೆ ಕೆಲ ದಿನಗಳ ಹಿಂದೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ತಜ್ಞರ ಪ್ರಕಾರ ಈ ರೀತಿಯ ಪ್ರಕ್ರಿಯೆಯಾಗುವುದು, ಮಳೆ ಮತ್ತು ಗುಡುಗು, ಮಿಂಚು ಒಟ್ಟಿಗೆ ಕಾಣಿಸಿಕೊಂಡಾಗ ಇದಾಗುತ್ತದೆ. ಇದನ್ನು ಚೀನಿಯರು ಸಮುದ್ರದ ನೀರನ್ನು ಡ್ರ್ಯಾಗನ್ ಕುಡಿಯುತ್ತದೆ ಎಂದು ಹೇಳುತ್ತಾರೆ.
ಕೆಲವೊಮ್ಮೆ ಈ ವಾಟರ್‌ಸ್ಪೌಟ್‌ಗಳು ತೀವ್ರ ಹಾನಿಗೊಳಿಸುತ್ತವೆ ಎಂದು ಹೇಳಲಾಗುತ್ತದೆ. ಆದರೆ ಇನ್ನು ಕೆಲವು ಯಾವುದೇ ರೀತಿಯ ಹಾನಿ ಮಾಡದಿದ್ದರೂ, ಕಣ್ಣಿಗೆ ಮನೋಹರ ದೃಶ್ಯ ತೋರಿಸುತ್ತದೆ.
https://www.facebook.com/PeoplesDaily/videos/659234884722628