ಮನೆಯ ಅಂದ ಹೆಚ್ಚಿಸಲು ಗೋಡೆಯ ಬಣ್ಣಕ್ಕೆ ಹೊಂದಿಕೊಳ್ಳುವ ಸೋಫಾ ತಂದಿದ್ದೀರಾ, ಮನೆಯ ಮಕ್ಕಳು ಅದರ ಮೇಲೆ ಚಹಾ\ಕಾಫಿಯ ಕಲೆ ಮಾಡಿಬಿಟ್ಟಿದ್ದಾರಾ. ಚಿಂತೆ ಬಿಡಿ. ಅದನ್ನು ತೆಗೆಯುವ ವಿಧ ತಿಳಿಯೋಣ.
ಚಹಾದ ಕಲೆ ಮತ್ತಷ್ಟು ಹರಡದಂತೆ ತಡೆಯಲು ಮೊದಲು ಸೋಫಾದ ಕುಷನ್ ತೆಗೆದು ಹಾಕಿ. ಸೋಫಾ ಮೇಲೆ ಚೆಲ್ಲಿದ ದ್ರವವನ್ನು ಬಿಳಿಬಟ್ಟೆಯಲ್ಲಿ ಒತ್ತಿ ತೆಗೆಯಿರಿ. ಸಾಧ್ಯವಾದಷ್ಟು ಬಿಳಿ ಬಟ್ಟೆಯಲ್ಲಿ ಹಿಂಡಿ ತೆಗೆಯುವುದರಿಂದ ಅದರ ಕಲೆ ಸೋಫಾದ ಮೇಲೆ ಉಳಿಯದು.
ಕುಶನ್ ಕವರ್ ತೆಗೆಯಲು ಸಾಧ್ಯವಿಲ್ಲ ಎಂದಾದರೆ ಅಡುಗೆ ಸೋಡಾ ಮತ್ತು ಉಪ್ಪು ಬೆರೆಸಿ ಅದರ ಮೇಲೆ ಹಾಕಿ ಮೂವತ್ತು ನಿಮಿಷ ಬಿಡಿ. ಕಲೆ ತನ್ನಿಂತಾನೇ ಮಾಯವಾಗುತ್ತದೆ.
ಕಾಫಿ ಕಲೆಗಳನ್ನು ತೆಗೆದು ಹಾಕಲು ನೀವು ಲಿಕ್ವಿಡ್ ಡಿಟರ್ಜೆಂಟ್ ಹಾಕಬಹುದು. ಇದರಲ್ಲಿ ಹತ್ತರಿಂದ ಮೂವತ್ತು ನಿಮಿಷದ ತನಕ ನೆನೆಸಿಡುವುದರಿಂದ ಈ ಕಲೆಯನ್ನು ತೆಗೆದು ಹಾಕಬಹುದು. ಇಂಥ ಕಲೆಗಳನ್ನು ತಪ್ಪಿಯೂ ಕೈಯಿಂದ ಉಜ್ಜದಿರಿ. ಇದು ಮತ್ತಷ್ಟು ಅಗಲಕ್ಕೆ ಹರಡಿ ಕಲೆಯನ್ನು ದೊಡ್ಡದಾಗಿಸಬಹುದು. ಇದನ್ನು ವ್ಯಾಕ್ಯೂಮ್ ಕ್ಲೀನರ್ ನಿಂದಲೂ ತೆಗೆದು ಹಾಕಬಹುದು.