ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ -19 ಪರೀಕ್ಷೆ ಸೌಲಭ್ಯ ಶುರುವಾಗಿದೆ. ಶನಿವಾರದಿಂದ ಈ ಸೇವೆಯನ್ನು ಶುರು ಮಾಡಲಾಗಿದೆ. ವಿದೇಶದಿಂದ ಬರುವ ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆ ನಡೆಸಲಾಗುವುದು.
ಸೆಪ್ಟೆಂಬರ್ ಮಧ್ಯದಲ್ಲಿ ಈ ಪರೀಕ್ಷಾ ಕೇಂದ್ರದಲ್ಲಿ ಪ್ರತಿದಿನ 2,500 ಮಾದರಿಗಳನ್ನು ತೆಗೆದುಕೊಳ್ಳಲಾಗುವುದು. ಅಗತ್ಯವಿದ್ದರೆ ಈ ಸಾಮರ್ಥ್ಯವನ್ನು ದಿನಕ್ಕೆ 15,000 ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಡಿಐಎಎಲ್ ಹೇಳಿದೆ. ದೇಶೀಯ ವಿಮಾನಗಳನ್ನು ಸಂಪರ್ಕಿಸುವ ಮೊದಲು ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ಪರೀಕ್ಷಿಸಲು ಜೆನ್‌ಸ್ಟ್ರಿಂಗ್ಸ್ ಡಯಾಗ್ನೋಸ್ಟಿಕ್ ಸೆಂಟರ್ ಸಹಯೋಗದೊಂದಿಗೆ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ.
ಪರೀಕ್ಷಾ ಕೇಂದ್ರವನ್ನು 3,500 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಪರೀಕ್ಷೆಗೆ 2,400 ರೂಪಾಯಿ ಶುಲ್ಕ ವಿಧಿಸಲಾಗುವುದು. ಇಲ್ಲಿ ಕೇವಲ ಮಾದರಿ ಸಂಗ್ರಹಿಸಲಾಗುವುದಿಲ್ಲ. ವರದಿ ಕೂಡ ನೀಡಲಾಗುವುದು. ಆರು ಗಂಟೆಯಲ್ಲಿ ಪರೀಕ್ಷಾ ವರದಿ ಪ್ರಯಾಣಿಕರ ಕೈ ಸೇರಲಿದೆ.