alex Certify ನನ್ನ ಮಗ ಮುಗ್ಧ ಡ್ರಗ್ಸ್ ಕಿಂಗ್ ಪಿನ್ ಅಲ್ಲ: ಶ್ರೀರಾಮ್ ಖನ್ನಾ ಕಣ್ಣೀರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನ್ನ ಮಗ ಮುಗ್ಧ ಡ್ರಗ್ಸ್ ಕಿಂಗ್ ಪಿನ್ ಅಲ್ಲ: ಶ್ರೀರಾಮ್ ಖನ್ನಾ ಕಣ್ಣೀರು

ತಮ್ಮ ಮಗನಿಗೂ ಡ್ರಗ್ಸ್ ಗೂ ಯಾವುದೇ ಸಂಬಂಧವಿಲ್ಲ. ಆತ ಒಬ್ಬ ಮುಗ್ಧ. ಆತನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆದಿದೆ ಎಂದು ಡ್ರಗ್ಸ್ ಪ್ರಕರಣದ ಆರೋಪಿ ವಿರೇನ್ ಖನ್ನಾ ತಂದೆ ಶ್ರೀರಾಮ್ ಖನ್ನಾ ತಿಳಿಸಿದ್ದಾರೆ.

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ವಿರೇನ್ ಖನ್ನಾ ತಂದೆ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದು, ತಮ್ಮ ಮಗ ಓರ್ವ ಮುಗ್ಧ. ಈ ಪ್ರಕರಣಕ್ಕೂ ಆತನಿಗೂ ಯಾವುದೇ ಸಂಬಂಧವಿಲ್ಲ. ಆರೋಪಗಳಿದ್ದರೆ ತನಿಖೆ ನಡೆಸಲಿ, ನಾವೂ ಕೂಡ ಸಹಕರಿಸುತ್ತೇವೆ. ಆದರೆ ಆತನನ್ನು ಬಂಧಿಸಿ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದರು.

ವಿರೇನ್ ಖನ್ನಾ ಹೆಸರು ಹೇಳಿರುವ ರವಿಶಂಕರ್ ಯಾರೆಂದೇ ನಮಗೆ ಗೊತ್ತಿಲ್ಲ. ವಿರೇನ್ ಹಲವು ವರ್ಷಗಳಿಂದ ಇವೆಂಟ್ ಆಯೋಜನೆ ಮಾಡುತ್ತಿದ್ದ. ಇದರಲ್ಲಿ ದೊಡ್ಡ ದೊಡ್ಡ ಪಾರ್ಟಿಗಳು ಇರುತ್ತಿದ್ದವು. ಅದರಲ್ಲಿ ಮದ್ಯಪಾನ ಸಹಜ. ಆದರೆ ಡ್ರಗ್ಸ್ ವ್ಯವಹಾರವಾಗಲಿ, ಸಪ್ಲೈ ಆಗಲಿ ಇರಲಿಲ್ಲ. ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಪಾರ್ಟಿ ಆಯೋಜನೆ ಮಾಡುತ್ತಿದ್ದುದರಿಂದ ಆತನಿಗೆ ಆಗದವರು ಅವನ ವಿರುದ್ಧ ಡ್ರಗ್ಸ್ ಪ್ರಕರಣದ ಆರೋಪಗಳನ್ನು ಮಾಡಿ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಪೊಲೀಸರು ವಿರೇನ್ ಗೆ ಹಾಗೂ ನಮ್ಮ ಮೇಲೆಯೂ ಒತ್ತಡ ಹಾಕಿ ಕೆಲ ಹೆಸರುಗಳನ್ನು ಹೇಳುವಂತೆ ಬಲವಂತವಾಗಿ ಒತ್ತಾಯಿಸುತ್ತಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...