ಕೊರೊನಾ ವೈರಸ್ ವಿಶ್ವದಲ್ಲಿ ಕಾಣಿಸಿಕೊಂಡ ಬಳಿಕ ಹತ್ತು ಹಲವು ಬದಲಾವಣೆಗಳನ್ನು ನಾವೆಲ್ಲ ನೋಡುತ್ತಿದ್ದೇವೆ. ಇದರಲ್ಲಿ ಭಾರತದಲ್ಲಿ ನಡೆಯುವ ಅದ್ಧೂರಿ ಮದುವೆಗಳು ಒಂದು.
ಭಾರಿ ಭೋಜನ, ಅದ್ಧೂರಿ ಸಿಂಗಾರ, ದೊಡ್ಡ ಛತ್ರದಲ್ಲಿ ನಡೆಯುತ್ತಿದ್ದ ವಿವಾಹಗಳು ಇದೀಗ ಸರಳವಾಗಿ, ಝೂಮ್ ಆ್ಯಪ್ ಮೂಲಕ ನಡೆಯುತ್ತಿರುವುದನ್ನು ನೋಡಿದ್ದೇವೆ. ಇದೀಗ ಕೊರೊನಾ ನಂತರವೂ ಹೀಗೆ ಸರಳ ವಿವಾಹ ಆಚರಣೆಯಾಗಲಿ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇದಕ್ಕೆ ಬೆಂಬಲಿಸಿ ದೆಹಲಿ ಮೂಲದ ನಿಖಾ ಫಾರ್ ಎವರ್ ಎನ್ನುವ ಮ್ಯಾಟ್ರಿಮೋನಿ ಸಂಸ್ಥೆಯ ಸಿಇಒ ರೆಹಮಾನ್ ಹಲವು ಜಾಗೃತಿ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾರೆ. ಕೊರೊನಾ ಸಮಯದಲ್ಲಿ ಅದ್ಧೂರಿ ವಿವಾಹದಿಂದ ಆಗುವ ಹಲವು ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.