ಹುಟ್ಟುವ ಮಗು ಗಂಡೋ/ಹೆಣ್ಣೋ ಎಂಬ ಕುತೂಹಲ ಮಗುವಿನ ನಿರೀಕ್ಷೆಯಲ್ಲಿರುವ ಎಲ್ಲಾ ದಂಪತಿಗಳಿಗೂ ಇದ್ದೇ ಇರುತ್ತದೆ. ಈ ಕಾತರವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿರುವ ಅನಾಸ್ ಹಾಗೂ ಅಸಾಲಾ ಮರ್ವಾ ಎಂಬ ಮೂಲದ ಜೋಡಿಯೊಂದು ವಿಶಿಷ್ಟ ಪಾರ್ಟಿಯೊಂದನ್ನು ಹಮ್ಮಿಕೊಂಡಿದೆ.
ಮಗುವಿನ ನಿರೀಕ್ಷೆಯಲ್ಲಿರುವ ಪೋಷಕರಿಗೆ ಜಂಡರ್ ರಿವೀಲ್ ಪಾರ್ಟಿಗಳನ್ನು ಆಯೋಜಿಸುವುದು ಅತ್ಯಂತ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಆದರೆ ಅನಾಸ್ & ಅಸಾಲಾ ಜೋಡಿಯು ಈ ಪಾರ್ಟಿಯನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದೆ.
ದುಬೈನ ಬುರ್ಜ್ ಖಲೀಫಾ ಟವರ್ ಅನ್ನು ಪಿಂಕ್ ಹಾಗೂ ನೀಲಿ ಬಣ್ಣಗಳಿಂದ ಝಗಮಗಿಸುವಂತೆ ಮಾಡಿದ ಈ ಜೋಡಿಯು ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. 830 ಮೀಟರ್‌ನಷ್ಟು ಎತ್ತರವಿರುವ, 163 ಮಹಡಿಗಳ ಈ ಕಟ್ಟಡವು “It’s a boy!” ಎಂದು ಮುಂಬರುವ ಮಗು ಯಾವುದಿರಲಿದೆ ಎಂದು ಪ್ರಾಜೆಕ್ಟ್ ಮಾಡಿ ತೋರಿದೆ. ಈ ಕಾರ್ಯಕಮವನ್ನು ಜಗತ್ತಿನ ಅತಿ ದೊಡ್ಡ ಲಿಂಗ ಪತ್ತೆ ಸಮಾರಂಭ ಎಂದು ಕರೆಯಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಈ ಕ್ಷಣಗಳ ತುಣುಕುಗಳನ್ನು ಅನಾಸ್ ಶೇರ್ ಮಾಡಿಕೊಂಡಿದ್ದಾರೆ.
https://www.instagram.com/p/CE7NMiUAeCb/?utm_source=ig_embed