ಇಡೀ ವಿಶ್ವ ಕೊರೊನಾ ವಿರುದ್ಧ ಹೋರಾಟದಲ್ಲಿ ನಿರತವಾಗಿದೆ. ಕೇಂದ್ರ ಸರಕಾರ ಎರಡು ತಿಂಗಳ ಲಾಕ್‌ಡೌನ್ ಬಳಿಕ ಇದೀಗ ಅನ್‌ಲಾಕ್ 4.0 ಅನ್ನು ಜಾರಿಗೊಳಿಸಿದೆ. ಆದರೂ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ. ಆದರೀಗ ಕೊರೊನಾ ವಿರುದ್ಧದ ಹೋರಾಟದಲ್ಲಿರುವ ಜನರಿಗೆ ಇರುವ ಸರಳ ಮಾರ್ಗವನ್ನು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಹೌದು, ದೆಹಲಿ ಪೊಲೀಸರು ಇತ್ತೀಚೆಗೆ ಹಾಕಿರುವ ಪೋಸ್ಟ್ ಒಂದರಲ್ಲಿ, ಕೊರೊನಾ ವಿರುದ್ಧ ಯಾವ ರೀತಿ ಹೋರಾಡಬೇಕು ಎಂದು ಗೂಗಲ್ ಸರ್ಚ್ ಮಾಡಿದ್ದು, ಅದಕ್ಕೆ ಉತ್ತರ “ಮನೆಯಲ್ಲಿಯೇ ಇರುವುದುʼ ಎಂದು ಬರುವಂತೆ ಮಾಡಿ, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಸಾಧ್ಯವಾದಷ್ಟೂ ಮನೆಯಲ್ಲಿಯೇ ಇದ್ದು ಕೊರೊನಾದಿಂದ ತಪ್ಪಿಸಿಕೊಳ್ಳಿ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದೆ.
ಇದೀಗ ಈ ಪೋಸ್ಟ್ ಟ್ವೀಟರ್‌ನಲ್ಲಿ ವೈರಲ್ ಆಗಿದ್ದು, ಅನೇಕರು ದೆಹಲಿ ಪೊಲೀಸರ ಈ ಕಾರ್ಯವನ್ನು ಮೆಚ್ಚಿದ್ದರೆ, ಇನ್ನು ಕೆಲವರು ಊಟಕ್ಕಾಗಿ ಮನೆಯಿಂದ ಆಚೆ ಬರುವುದು ಅನಿವಾರ್ಯವೆಂದು ಹೇಳಿದ್ದಾರೆ.
https://www.instagram.com/p/CE9GQs3ppx6/?utm_source=ig_embed