alex Certify 62 ವರ್ಷದ ಹೆಬ್ಬಾವು ಏಳು ಮೊಟ್ಟೆಯಿಟ್ಟ ಕಥೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

62 ವರ್ಷದ ಹೆಬ್ಬಾವು ಏಳು ಮೊಟ್ಟೆಯಿಟ್ಟ ಕಥೆ….!

62 ವರ್ಷದ ಹೆಬ್ಬಾವೊಂದು ಏಳು ಮೊಟ್ಟೆಗಳನ್ನು ಇಟ್ಟಿರುವ ವಿಚಿತ್ರ ಘಟನೆಯೊಂದು ಅಮೆರಿಕದ ಮಿಸ್ಸೋರಿಯಲ್ಲಿ ನಡೆದಿದೆ. ಮಿಸ್ಸೋರಿಯ ಸೇಂಟ್‌ ಲೂಯಿಸ್‌ ಝೂನಲ್ಲಿ ಈ ಘಟನೆ ನಡೆದಿದೆ. ಸಹಜವಾಗಿ ಬಾಲ್‌ ಪೈಥಾನ್‌ ಪ್ರಬೇಧದ ಹೆಬ್ಬಾವು 60 ವರ್ಷದ ಬಳಿಕ ಸಂತಾನೋತ್ಪತ್ತಿ ಮಾಡುವುದಿಲ್ಲ. ಆದರೆ ಸೇಂಟ್‌ ಲೂಯಿಸ್‌ನ ಝೂನಲ್ಲಿರುವ ಈ ಹೆಬ್ಬಾವು ಏಳು ಮೊಟ್ಟೆಗಳನ್ನು ಇಟ್ಟಿದೆ.

ಈ ಬಗ್ಗೆ ಸರೀಸೃಪ ಶಾಸ್ತ್ರ ತಜ್ಞ ಮಾರ್ಕ್‌ ವಾನ್ನೆರ್‌ ಮಾತನಾಡಿದ್ದು, ಇದು ಅಸಹಜ. ಆದರೆ ಈ ಪ್ರಬೇಧದ ಹೆಬ್ಬಾವಿನಲ್ಲಿ ಇದು ಆಗ್ಗಾಗೆ ಆಗುತ್ತಿರುತ್ತದೆ ಎಂದು ಹೇಳಲಾಗುತ್ತೆ. ಕೊಮೊಡೋ ಡ್ರಾಗನ್ಸ್‌ ಪ್ರಬೇಧದ ಹಾವುಗಳು ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸದೇ ಸಂತಾನೋತ್ಪತ್ತಿ ಮಾಡಲು ಶಕ್ತವಾಗಿರುತ್ತದೆ. ಇದೇ ರೀತಿ ಇದು ಆಗಿದೆಯೇ ಎನ್ನುವುದನ್ನು ನೋಡಬೇಕಿದೆ ಎಂದಿದ್ದಾರೆ.

ಇದೀಗ ಏಳು ಮೊಟ್ಟೆಗಳನ್ನು ಇಟ್ಟಿರುವ ಈ ಹೆಬ್ಬಾವು ಜಗತ್ತಿನ ಅತಿ ಹಿರಿಯ ಹೆಬ್ಬಾವು ಎನ್ನುವ ಮಾತುಗಳನ್ನು ಅಧಿಕಾರಿಗಳು ಹೇಳಿದ್ದಾರೆ. ಏಳು ಮೊಟ್ಟೆಗಳ ಪೈಕಿ ಎರಡು ಹಾಳಾಗಿದ್ದು, ಮೂರು ಮೊಟ್ಟೆಗಳು ಈಗಲೂ ಇನ್ಕೂಬೇಟರ್‌ನಲ್ಲಿಡಲಾಗಿದೆ. ಇನ್ನುಳಿದ ಎರಡು ಜೆನೆಟಿಕ್‌ ಸ್ಯಾಂಪಲ್‌ಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...