2021 ರಲ್ಲಿ ಒಂದು ಬಿಲಿಯನ್ ಗಿಂತಲೂ ಹೆಚ್ಚು ಜನರಿಗೆ ಕೊರೊನಾ ಲಸಿಕೆ ಸ್ಪುಟ್ನಿಕ್ V ಲಭ್ಯವಾಗಲಿದೆ ಎಂದು ರಷ್ಯಾ ಹೇಳಿದೆ.
ಕೊರೊನಾ ಸೋಂಕು ತಡೆಗೆ ಲಸಿಕೆ ಕಂಡು ಹಿಡಿಯುವ ಸ್ಪರ್ಧೆಗಳ ನಡುವೆ ರಷ್ಯಾ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ಲಸಿಕೆ 2020 – 21 ರೊಳಗೆ ಒಂದು ಶತ ಕೋಟಿಗೂ ಹೆಚ್ಚು ಜನರಿಗೆ ಲಭ್ಯವಾಗಲಿದೆ ಎಂದು ರಷ್ಯಾ ಮಾಹಿತಿ ನೀಡಿದೆ.
ಲಸಿಕೆಯನ್ನು ವಿದೇಶಕ್ಕೆ ರಫ್ತು ಮಾಡುವ ಬಗ್ಗೆ ಮಾಹಿತಿ ನೀಡಿದ ರಷ್ಯಾ, ಬ್ರೆಜಿಲ್ ರಾಜ್ಯ ಬಹಿಯಾದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಬ್ರೆಜಿಲ್ ಮಾರುಕಟ್ಟೆಗೆ 50 ಮಿಲಿಯನ್ ಡೋಸ್ ಗಳನ್ನು ಖರೀದಿ ಮಾಡುವ ಉದ್ದೇಶ ಹೊಂದಿದೆ.
ಕಜಕಿಸ್ತಾನದೊಂದಿಗೆ ಮತ್ತೊಂದು ಒಪ್ಪಂದ ಮಾಡಿಕೊಂಡಿದ್ದು 2 ಮಿಲಿಯನ್ ಗಿಂತಲೂ ಹೆಚ್ಚಿನ ಪ್ರಮಾಣದ ಲಸಿಕೆ ಖರೀದಿಸಲು ಒಪ್ಪಿಗೆ ನೀಡಲಾಗಿದೆ. ಅದು 5 ಮಿಲಿಯನ್ ಡೋಸ್ ಗಳಿಗೆ ಹೆಚ್ಚಳವಾಗಬಹುದು. ಭಾರತ 300 ಮಿಲಿಯನ್ ಲಸಿಕೆಯನ್ನು ಉತ್ಪಾದಿಸಲಿದೆ ಎಂದು ಹೇಳಲಾಗಿದೆ.
ರಷ್ಯಾದ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಗಮಾಲೆಯ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ಲಸಿಕೆಯನ್ನು ನಾಗರಿಕರ ಬಳಕೆಗಾಗಿ ಬಿಡುಗಡೆ ಮಾಡಲು ಅನುಮತಿ ನೀಡಬಹುದಾಗಿದೆ ಎಂದು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕ ಡೆನಿಸ್ ಲೋಗುನೋವ್ ಹೇಳಿದ್ದಾರೆ.