ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಅವರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಲಾಗಿದೆ.
ಇಂದಿಗೆ ಕಸ್ಟಡಿ ಅಂತ್ಯವಾಗಿದ್ದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಸಿಸಿಬಿಯಿಂದ 5 ದಿನಗಳ ಕಾಲ ಕಸ್ಟಡಿಗೆ ಕೊಡುವಂತೆ ಕೇಳಲಾಗಿದ್ದು, ಕೋರ್ಟ್ ಮೂರು ದಿನ ಸಿಸಿಬಿ ಕಸ್ಟಡಿಗೆ ವಹಿಸಿದೆ. ಇಬ್ಬರೂ ಇನ್ನೂ ಮೂರು ದಿನ ಸಾಂತ್ವನ ಕೇಂದ್ರದಲ್ಲೇ ಇರಬೇಕಿದೆ.