ಕ್ರಿಕೆಟ್ ದಕ್ಷಿಣ ಆಫ್ರಿಕಾ ಬಹಳ ಕಷ್ಟದಲ್ಲಿ ಸಿಲುಕಿಕೊಂಡಿದೆ. ಆರ್ಥಿಕ ತೊಂದರೆಗಳ ಆರೋಪದಡಿ ಕ್ರಿಕೆಟ್ ದಕ್ಷಿಣ ಆಫ್ರಿಕಾ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ. ಸರ್ಕಾರ, ಮಂಡಳಿಯ ಎಲ್ಲ ದೊಡ್ಡ ಹುದ್ದೆಯಲ್ಲಿರುವವರು ಸ್ಥಾನದಿಂದ ಕೆಳಗಿಳಿಯುವಂತೆ ಆದೇಶ ನೀಡಿದೆ. ದಕ್ಷಿಣ ಆಫ್ರಿಕಾದ ಕ್ರೀಡಾ ಮತ್ತು ಒಲಿಂಪಿಕ್ ಸಮಿತಿಯು ಎಲ್ಲ ನಿಯಂತ್ರಣವನ್ನು ತಮ್ಮ ಕೈಯಲ್ಲಿ ತೆಗೆದುಕೊಂಡಿದೆ. ಆದಾಗ್ಯೂ, ಕ್ರಿಕೆಟ್ ದಕ್ಷಿಣ ಆಫ್ರಿಕಾ, ಸರ್ಕಾರದ ಈ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುವ ಆಲೋಚನೆ ಮಾಡ್ತಿದೆ.
ಗುರುವಾರ, ಕ್ರಿಕೆಟ್ ದಕ್ಷಿಣ ಆಫ್ರಿಕಾ ಮಂಡಳಿಯ ಎಲ್ಲಾ ಸದಸ್ಯರಿಗೆ ಹುದ್ದೆಗಳಿಂದ ಕೆಳಗಿಳಿಯುವಂತೆ ಸರ್ಕಾರ ಕೇಳಿದೆ. ಈ ಕ್ರಮವನ್ನು ವಿರೋಧಿಸಿ, ಕ್ರಿಕೆಟ್ ದಕ್ಷಿಣ ಆಫ್ರಿಕಾ ಈಗ ಕಾನೂನು ಹೋರಾಟ ನಡೆಸಲು ನಿರ್ಧರಿಸಿದೆ. ಸರ್ಕಾರವು ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಕ್ರಿಕೆಟ್ನ ಹಿತದೃಷ್ಟಿಯಿಂದಲ್ಲ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಹೇಳಿದೆ.
2019ರಲ್ಲಿ ಕ್ರಿಕೆಟ್ ದಕ್ಷಿಣ ಆಫ್ರಿಕಾದ ಎಲ್ಲ ತಪ್ಪುಗಳು ಬಹಿರಂಗವಾಗಿವೆ ಎಂದು ಸಾಸ್ಕಾಕ್ ಹೇಳಿದೆ. ದೇಶದ ಕ್ರಿಕೆಟ್ ಚಿತ್ರಣವು ರಾಷ್ಟ್ರೀಯ ತಂಡ, ಪ್ರಾಯೋಜಕರು ಮತ್ತು ಅಭಿಮಾನಿಗಳ ಮನಸ್ಥಿತಿಯನ್ನು ಹಾಳು ಮಾಡಿದೆ ಎಂದು ಸಾಸ್ಕಾಕ್ ಹೇಳಿದೆ. ಸರ್ಕಾರದ ಈ ಕ್ರಮದಿಂದಾಗಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಕ್ರಿಕೆಟ್ ದಕ್ಷಿಣ ಆಫ್ರಿಕಾ ಹೊರ ಬೀಳುವ ಸಾಧ್ಯತೆಯಿದೆ.
ಕ್ರಿಕೆಟ್ ವಿವಾದವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮೇಲ್ವಿಚಾರಣೆ ಮಾಡಿದೆ. ಐಸಿಸಿ ನಿಯಮಗಳ ಪ್ರಕಾರ, ದೇಶದ ಕ್ರಿಕೆಟ್ ಮಂಡಳಿಯಲ್ಲಿ ಸರ್ಕಾರ ನೇರವಾಗಿ ಹಸ್ತಕ್ಷೇಪ ಮಾಡಬಾರದು. ದಕ್ಷಿಣ ಆಫ್ರಿಕಾದ ಸರ್ಕಾರಿ ಸಂಸ್ಥೆ ಸಾಸ್ಕೊಕ್ ಕ್ರಿಕೆಟ್ ಮೇಲೆ ಹಿಡಿತ ಸಾಧಿಸಿದರೆ, ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ದಕ್ಷಿಣ ಆಫ್ರಿಕಾ ಹೊರಬೀಳುವ ಸಾಧ್ಯತೆಯಿದೆ.