ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಶಾಸಕ ಜಮೀರ್ ಅಹ್ಮದ್ ಕೂಡ ಶ್ರೀಲಂಕಾದ ಕ್ಯಾಸಿನೋ ನಂಟು ಹೊಂದಿದ್ದಾರೆ ಎಂಬ ಆರೋಪ ಹಿನ್ನಲೆಯಲ್ಲಿ ಶಾಸಕರನ್ನು ಸಿಸಿಬಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ, ಶಾಸಕ ಜಮೀರ್ ಅಹ್ಮದ್ ನಟಿ ಸಂಜನಾ ಜತೆ ಶ್ರೀಲಂಕಾದಲ್ಲಿ ಕ್ಯಾಸಿನೋದಲ್ಲಿ ಪಾಲ್ಗೊಂಡಿದ್ದರು ಎಂದು ಆರೋಪಿಸಿದ್ದರು. ಅಲ್ಲದೇ ಜೂನ್ 8, 2019ರಂದು ಜಮೀರ್ ಕೊಲಂಬೋದಲ್ಲಿರುವ ಕ್ಯಾಸಿನೋದಲ್ಲಿ ಇದ್ದರು ಎಂಬ ಬಗ್ಗೆ ತಮ್ಮ ಬಳಿ ದಾಖಲೆಗಳು ಇರುವುದಾಗಿ ಹೇಳಿದ್ದರು.
ಜಮೀರ್ ಆಪ್ತ ಶೇಖ್ ಫೈಜುಲ್ಲಾ ಕ್ಯಾಸಿನೋ ನಡೆಸುತ್ತಿದ್ದು, ಹಣ ಹೂಡಿಕೆ ಮಾಡಿದ್ದಾಗಿ ತಮ್ಮ ಬಳಿ ದಾಖಲೆಗಳಿರುವುದಾಗಿಯೂ ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಂಬರಗಿ ಹೇಳಿಕೆ ಶಾಸಕ ಜಮೀರ್ ಅಹ್ಮದ್ ಅವರಿಗೆ ಮುಳುವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನು ಶಾಸಕ ಜಮೀರ್ ಅಹ್ಮದ್ ವಿರುದ್ಧದ ಆರೋಪದ ಬೆನ್ನಲ್ಲೇ ರಾಜ್ಯದ ವಿಧಾನಪರಿಷತ್ ಮಾಜಿ ಸದಸ್ಯರೊಬ್ಬರಿಗೂ ಶ್ರೀಲಂಕಾ ಕ್ಯಾಸಿನೋ ನಂಟಿದೆ ಎಂಬ ಮಾತು ಕೇಳಿ ಬಂದಿದೆ.