ಸಮುದ್ರದಲ್ಲಿ ತಿಮಿಂಗಲ ನೋಡುವುದು ಸಾಮಾನ್ಯ. ಅದನ್ನು ನೋಡಿದಾಗ ಅನೇಕರಿಗೆ ಖುಷಿಯೊಂದಿಗೆ ಅಚ್ಚರಿಯಾಗುತ್ತದೆ. ಆದರೆ ಅದೇ ತಿಮಿಂಗಲ ನೀವಿರುವ ಬೀಚ್ನ ದಂಡೆಯ ಬಳಿಯೇ ಬಂದರೆ ಏನಾಗುವುದಿಲ್ಲ?
ಹೌದು, ನಾವು ಹೇಳುತ್ತಿರುವುದೇನು ಕಥೆಯಲ್ಲ. ಬದಲಿಗೆ ಮ್ಯಾಸಚೂಸೆಟ್ಸ್ನ ಸಮುದ್ರದ ದಂಡೆಯಲ್ಲಿ ನಿಜವಾಗಿಯೂ ಕಾಣಿಸಿಕೊಂಡಿದೆ. ಬೀಚ್ನಲ್ಲಿ ಸುಮಾರು 10 ಅಡಿ ದೂರದಲ್ಲಿ ಶಾರ್ಕ್ನ ಬಾಲ ಕಾಣಿಸುತ್ತಿರುವುದನ್ನು ನೋಡಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಈ ವಿಡಿಯೊದಲ್ಲಿ ಜನರು ನೋಡುತ್ತಿದ್ದಂತೆ, ತಿಮಿಂಗಲದ ಬಾಲ ಕಾಣಿಸಿಕೊಂಡಿದೆ. ಇದನ್ನು ನೋಡಿದ ಅನೇಕರು ಗಾಬರಿ ಬಿದ್ದಿದ್ದಾರೆ. 10 ಅಡಿ ದೂರದಲ್ಲಿದ್ದ ಶಾರ್ಕ್, 12-14 ಅಡಿ ಉದ್ದ, 3-4 ಅಡಿ ಅಗಲ ಇತ್ತು ಎಂದು ಹೇಳಲಾಗಿದೆ.
ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರು ತಿಮಿಂಗಲವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಕೆಲವರು ಇಷ್ಟು ಹತ್ತಿರದಿಂದ ತಿಮಿಂಗಲ ನೋಡಿದವರು ಪುಣ್ಯವಂತರು ಎಂದು ಹೇಳಿದರೆ, ಇನ್ನು ಕೆಲವರು ದಡದ ಹತ್ತಿರಕ್ಕೆ ಬರಲು ಹೇಗೆ ಸಾಧ್ಯ? ಆಳದ ಸಮುದ್ರದಿಂದ ತಪ್ಪಿಸಿಕೊಂಡು ಬರಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
https://www.facebook.com/tamzen.t.mckenzie/posts/10220344442074056