ಅಮೆರಿಕದಲ್ಲಿರುವ ತುರ್ತು ನಂಬರ್‌ಗೆ ದಿನಕ್ಕೆ ನೂರಾರು ಚಿತ್ರ-ವಿಚಿತ್ರ ಕರೆಗಳು ಬರುವುದು ಸಹಜ. ಇದರಲ್ಲಿ ಕೆಲವು ಹುಸಿ ಕರೆಗಳಾಗಿದ್ದರೆ, ಇನ್ನು ಕೆಲವು ಪ್ರಾಣಿಗಳಿಂದ ರಕ್ಷಿಸಿ ಅಥವಾ ಮಕ್ಕಳು ಮಾಡುವ ಕಿತಾಪತಿಯಿಂದ ಕೂಡಿರುತ್ತದೆ. ಈ ರೀತಿ ಪ್ರಾಣಿಗಳಿಂದ ರಕ್ಷಿಸಿ ಎನ್ನುವ ಕರೆ ಕೆಲವೊಮ್ಮೆ ಭಾರಿ ಗಾಬರಿ ಮೂಡಿಸುತ್ತದೆ. ಇದಕ್ಕೆ ತಾಜಾ ಉದಾಹರಣೆಯಿಲ್ಲಿದೆ.
ಫ್ಲೋರಿಡಾದ ಪೊಲೀಸ್ ಅಧಿಕಾರಿಗೆ ಬಂದ ತುರ್ತು ಕರೆಯೊಂದಕ್ಕೆ ಪ್ರತಿಕ್ರಿಯಿಸಿ, ಸ್ಥಳಕ್ಕೆ ಧಾವಿಸಿದಾಗ ಅವರಿಗೆ ಕಂಡದ್ದು ಮೊಸಳೆ. ಹೌದು, ಪೋಲ್ಕ್ ಕೌಂಟಿ ಶೆರೀಫ್ ಕಚೇರಿಗೆ ಬಂದ ಕರೆಯನ್ನು ಆಧರಿಸಿ ಕರೆ ಮಾಡಿದವರ ಮನೆಗೆ ಹೋದಾಗ ಆ ಮನೆಯ ಕಾರ್ ಶೆಡ್‌ನಲ್ಲಿ ಮೊಸಳೆಯಿರುವುದು ತಿಳಿದಿದೆ.
ಮೊಸಳೆ ಹಿಡಿಯುವುದು ಪೊಲೀಸರಿಗೆ ಅಷ್ಟಾಗಿ ಗೊತ್ತಿಲ್ಲದಿದ್ದರೂ, ಈ ಠಾಣೆಯವರು ಮಾತ್ರ ಮೊಸಳೆಯನ್ನು ಹಿಡಿದು ರಕ್ಷಿಸಿದ್ದಾರೆ. ಇದನ್ನು ಪೊಲ್ಕ್ ಕೌಂಟಿ ಪೊಲೀಸರು ಟ್ವೀಟರ್‌ನಲ್ಲಿ ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರ ಈ ಧೈರ್ಯಕ್ಕೆ ನೆಟ್ಟಿಗರು ಶಹಬಾಸ್‌ಗಿರಿ ವ್ಯಕ್ತಪಡಿಸಿದ್ದಾರೆ.