ನವದೆಹಲಿ: ಬ್ಯಾಂಕ್ ಸಾಲದ ಕಂತು ಪಾವತಿಸುವ ಆತಂಕದಲ್ಲಿದ್ದವರಿಗೆ ಸೆಪ್ಟಂಬರ್ 28 ರವರೆಗೆ ವಿನಾಯಿತಿ ಸಿಕ್ಕಿದೆ. ಆಗಸ್ಟ್ ಮೂವತ್ತರವರೆಗೆ ವಸೂಲಾಗದ ಸಾಲ ಎಂದು ಪರಿಗಣಿಸದ ಯಾವುದೇ ಖಾತೆಯನ್ನು ಮುಂದಿನ ಆದೇಶದವರೆಗೆ ಅನುತ್ಪಾದಕ ಸಾಲವೆಂದು ಘೋಷಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಸಾಲ ಮುಂದೂಡಿಕೆ ಅವಧಿಗೆ ಬಡ್ಡಿ ವಿಧಿಸುವ ಕುರಿತಂತೆ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಗಳಿಗೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ಸಾಲದ ಕಂತುಗಳ ಪಾವತಿಗೆ ವಿನಾಯಿತಿ ಅವಧಿಯ ಕುರಿತಂತೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಎರಡು ವಾರ ಕಾಲಾವಕಾಶ ನೀಡಲಾಗಿದೆ. ಸೆಪ್ಟಂಬರ್ 28 ರವರೆಗೆ ಸಾಲಪಾವತಿ ವಿನಾಯಿತಿಗೆ ಅವಧಿ ವಿಸ್ತರಿಸಲು ಮಧ್ಯಂತರ ಆದೇಶದಲ್ಲಿ ತಿಳಿಸಲಾಗಿದೆ.