ಕೊರೊನಾದಿಂದ ಉದ್ಯೋಗ ಕ್ಷೇತ್ರದಲ್ಲಿ ಮಾತ್ರವಲ್ಲ ಬಹುತೇಕ ಎಲ್ಲಾ ವರ್ಗಗಳ ಎಲ್ಲಾ ಹುದ್ದೆಗಳಲ್ಲೂ ಹೆಚ್ಚಿನ ಬದಲಾವಣೆಗಳಾಗಿವೆ. ಜಂಕ್ ಫುಡ್ ಸೇವನೆ ಬಹುತೇಕ ಮೂಲೆ ಗುಂಪಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ತನ್ನಷ್ಟಕ್ಕೇ ಹುಟ್ಟಿಕೊಂಡಿದೆ.
ಹೀಗಾಗಿ ಜನ ಹೊರಗಿನ ಆಹಾರ ಸೇವಿಸುವುದು ಬಹುತೇಕ ನಿಲ್ಲಿಸಿದ್ದಾರೆ ಇಲ್ಲವೇ ಕಡಿಮೆಗೊಳಿಸಿದ್ದಾರೆ. ಮನೆಯಲ್ಲೇ ವೈವಿಧ್ಯಮಯ ತಿನಿಸುಗಳನ್ನು ತಯಾರಿಸುವುದರ ಜೊತೆ ಪೌಷ್ಟಿಕಾಂಶ ಭರಿತ ಆಹಾರಕ್ಕೂ ಆದ್ಯತೆ ನೀಡುತ್ತಿದ್ದಾರೆ. ಪರಿಣಾಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಿರಿಧಾನ್ಯಕ್ಕೆ ಬೇಡಿಕೆ ಭಾರೀ ಹೆಚ್ಚಿದೆ.
ಸಿರಿಧಾನ್ಯಗಳು ಗ್ಲುಟಿನ್ ಮುಕ್ತವಾಗಿದ್ದು ಅಧಿಕ ಪ್ರಮಾಣದ ಪ್ರೊಟೀನ್, ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಇದರ ಬಳಕೆ ಪ್ರಮಾಣ ಹೆಚ್ಚಿರುವುದರ ಪರಿಣಾಮ ಹೆಚ್ಚು ರೈತರು ಇದನ್ನು ಬೆಳೆಸಲು ಮುಂದಾಗಿದ್ದಾರೆ.
ಕರ್ನಾಟಕ ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರತಿ ಹೆಕ್ಟೇರ್ ಗೆ ಸರ್ಕಾರ 10 ಸಾವಿರ ರೂಪಾಯಿ ಸಬ್ಸಿಡಿ ನೀಡುತ್ತದೆ. ಗುಣಮಟ್ಟದ ಸಿರಿಧಾನ್ಯಗಳಿಗೆ ಸದಾ ಬೇಡಿಕೆ ಇದೆ ಎಂಬುದು ವಿಶೇಷ.