ಯಾದಗಿರಿ: ಅಂತರ್ ಜಾತಿ ವಿವಾಹಕ್ಕೆ ಮನೆಯಲ್ಲಿ ಒಪ್ಪಲಿಲ್ಲ ಎಂಬ ಕಾರಣಕ್ಕೆ ಪ್ರೇಮಿಗಳಿಬ್ಬರು ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಾದಗಿರಿ ಜಿಲ್ಲೆ ಗೊಂದಡಗಿಯಲ್ಲಿ ನಡೆದಿದೆ.
ಹನುಮಂತಪ್ಪ (21) ಹಾಗೂ ಮಹಾದೇವಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಹನುಮಂತಪ್ಪ ಹಾಗೂ ಮಹಾದೇವಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇಬ್ಬರದ್ದು ಜಾತಿ ಬೇರೆ ಬೇರೆಯಾಗಿದ್ದರಿಂದ ಇಬ್ಬರ ಮನೆಯಲ್ಲಿಯೂ ವಿವಾಹಕ್ಕೆ ಒಪ್ಪಿರಲಿಲ್ಲ.
ಯುವತಿ ಮಹಾದೇವಿಯ ಮನೆಯವರು ಹನುಮಂತಪ್ಪನನ್ನು ಕರೆದು ತಮ್ಮ ಮಗಳನ್ನು ಮರೆತುಬಿಡುವಂತೆ ಹೇಳಿದ್ದರು. ಇದರಿಂದ ಬೇಸತ್ತ ಪ್ರೇಮಿಗಳಿಬ್ಬರು ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ. ಮನೆಯಿಂದ ಹೊರ ಬಂದ ಮಹಾದೇವಿ ಹಾಗೂ ಹನುಮಂತಪ್ಪ ಸೆಲ್ಫಿ ವಿಡಿಯೋ ಮಾಡಿ ಕುಟುಂಬದ ಕ್ಷಮೆಯಾಚಿಸಿ ಗ್ರಾಮದ ಹೊರ ವಲಯದಲ್ಲಿರುವ ಕಲ್ಯಾಣಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.